ಟ್ರಂಪ್ ಹೊಸ ಕ್ಯಾತೆಗೆ ಕ್ಯೂಬಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Trump-a00-21

ಹವಾನಾ, ಜೂ.17-ಗಡಿಯಲ್ಲಿ ವಿವಾದಾತ್ಮಕ ಗೋಡೆ ನಿರ್ಮಾಣ ವಿಚಾರದಲ್ಲಿ ಈಗಾಗಲೇ ಮೆಕ್ಸಿಕೋ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ದ್ವೀಪರಾಷ್ಟ್ರ ಕ್ಯೂಬಾ ಜೊತೆಯೂ ಕ್ಯಾತೆ ತೆಗೆದಿದ್ದಾರೆ. ಆ ದೇಶದೊಂದಿಗೆ ಅಮೆರಿಕ ಹೊಂದಿರುವ ಸಂಬಂಧಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ಪ್ರಕಟಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ನಿಲುವನ್ನು ಕ್ಯೂಬಾ ತೀವ್ರವಾಗಿ ಟೀಕಿಸಿದೆ.

ಅಮೆರಿಕ ಮತ್ತು ಕ್ಯೂಬಾ ನಡುವೆ ಹಳಸಿದ್ದ ಸಂಬಂಧವನ್ನು ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಸರಿಪಡಿಸಿ ಹೊಸ ರಾಜತಾಂತ್ರಿಕ ಬಾಂಧವ್ಯಗಳನ್ನು ಕುದುರಿಸಿದ್ದರು. ಆದರೆ ಟ್ರಂಪ್, ಒಬಾಮಾ ಅವರ ಏಕಪಕ್ಷೀಯ ನಿರ್ಧಾರವನ್ನು ತಡೆಹಿಡಿದ್ದಾರೆ. ಅಲ್ಲದೇ ದ್ವೀಪರಾಷ್ಟ್ರದಲ್ಲಿ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಪುತ್ರ ರೌಲ್ ಕ್ಯಾಸ್ಟ್ರೋ ಅವರ ಸೇನಾ ಏಕಸ್ವಾಮ್ಯ ಚಕ್ರಾಧಿಪತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿದ್ದಾರೆ. ಇದರೊಂದಿಗೆ ಎರಡೂ ದೇಶಗಳ ನಡುವಣ ಶೀತಲ ಸಮರ ಮತ್ತೆ ಮರುಕಳಿಸುವಂತಾಗಿದೆ.
ಮಿಯಾಮಿಯ ಲಿಟ್ಲ್ ಹವಾನಾದಲ್ಲಿ ನಿನ್ನೆ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, ಕ್ಯೂಬಾ ಜೊತೆಗಿನ ಉದಾರ ಸಂಬಂಧಗಳಿಗೆ ನಾನು ಕಡಿವಾಣ ಹಾಕಲು ಬಯಸಿದ್ದೇನೆ. ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಯನ್ನು ನಾನು ಈಡೇರಿಸಬೇಕಿದೆ. ಅದಕ್ಕಾಗಿ ಆರ್ಥಿಕ ದಿಗ್ಬಂಧನ ಸೇರಿದಂತೆ ಕೆಲವೊಂದು ಕಠಿಣ ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ.   ಟ್ರಂಪ್ ಈ ಹೇಳಿಕೆಯನ್ನು ಖಂಡಿಸಿರುವ ಕ್ಯೂಬಾ ಇದೊಂದು ಹಗೆತನದ ಕ್ರಮವಾಗಿದೆ. ದಿಗ್ಬಂಧನ ವಿಧಿಸುವ ಅಮೆರಿಕದ ಹೊಸ ಕ್ರಮಗಳನ್ನು ಸರ್ಕಾರ ಖಂಡಿಸುತ್ತದೆ. ಆದಾಗ್ಯೂ ಈ ಸಂಬಂಧ ಅಮೆರಿಕದೊಂದಿಗೆ ಮಾತುಕತೆಗೆ ಸಿದ್ದವಿರುವುದಾಗಿ ಹೇಳಿಕೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin