ತಂಡ ಕಟ್ಟಿಕೊಂಡು ದರೋಡೆ ಮಾಡುತ್ತಿದ್ದ ವಜಾಗೊಂಡಿದ್ದ ಎಸ್‍ಐ ಸಿಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

3-Arreste-c-0021

ಬೆಂಗಳೂರು, ಜೂ.17- ಸೇವೆಯಿಂದ ವಜಾಗೊಂಡಿದ್ದ ಎಸ್‍ಐ ಚಂದ್ರಶೇಖರ್ ತನ್ನ ಸಹೋದರರನ್ನು ಸೇರಿಸಿಕೊಂಡು ದರೋಡೆ, ರಾಬರಿ ಮಾಡಿ ತಲೆಮರೆಸಿ ಕೊಂಡಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.  1987ರಲ್ಲಿ ಸಿಐಎಸ್‍ಎಫ್‍ಗೆ ಎಎಸ್‍ಐ ಆಗಿ ವೃತ್ತಿಗೆ ಸೇರಿದ್ದ ಚಂದ್ರಶೇಖರ್ ಸಬ್‍ಇನ್ಸ್‍ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸಿ 2001ನೆ ಸಾಲಿನಲ್ಲಿ ಸೇವೆಯಿಂದ ವಜಾಗೊಂಡಿದ್ದರು.  ಈ ಸಂದರ್ಭದಲ್ಲಿ ತನ್ನ ಸಹೋದರರಾದ ಮಂಜುನಾಥ (35) ಮತ್ತು ಅಶೋಕ್‍ಕುಮಾರ್ (37)ರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ದರೋಡೆ, ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದರು.

ಸಂಜಯನಗರದ ದೇವಸಂದ್ರ 2ನೆ ಕ್ರಾಸ್‍ನಲ್ಲಿ ವಾಸವಾಗಿದ್ದ ಇವರು ತದನಂತರ ನಾಗಸಂದ್ರದಲ್ಲಿ ಇದ್ದಾರೆಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ ಮೂವರನ್ನು ಬಂಧಿಸಿದ್ದಾರೆ. ಚಂದ್ರಶೇಖರ್ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ ಚನ್ನಪಟ್ಟಣ ಗ್ರಾಮಾಂತರ ಠಾಣೆ, ಎಲೆಕ್ಟ್ರಾನಿಕ್ ಸಿಟಿ ಡಕಾಯಿತಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ವಿರುದ್ಧ ನ್ಯಾಯಾಲಯವು ಘೋಷಿತ ಅಪರಾಧ ಪ್ರಕರಣವೆಂದು ಆದೇಶ ಹೊರಡಿಸಿದೆ.

ಈತನ ತಮ್ಮಂದಿರಾದ ಮಂಜುನಾಥ್ ಮತ್ತು ಅಶೋಕ್‍ಕುಮಾರ್ ಜೀವನ್‍ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಇವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ.   ಆರೋಪಿಗಳ ವಿರುದ್ಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin