ತಿರುಮಲದಲ್ಲಿ ಮಗುವನ್ನು ಕದ್ದು ಬೆಂಗಳೂರಿಗೆ ಬಂದ ದಂಪತಿಗಾಗಿ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Baby-Theft--01

ಬೆಂಗಳೂರು, ಜೂ.17- ಮಗುವನ್ನು ಕಳ್ಳತನ ಮಾಡಿರುವ ದಂಪತಿಯ ಹುಡುಕಾಟಕ್ಕಾಗಿ ನಗರಕ್ಕೆ ಬಂದಿರುವ ತಿರುಮಲ ಠಾಣೆ ಪೊಲೀಸರು ಮೆಜೆಸ್ಟಿಕ್‍ನ ಸುತ್ತಮುತ್ತಲಿನಲ್ಲಿರುವ ಲಾಡ್ಜ್‍ಗಳು, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಶೋಧ ನಡೆಸುತ್ತಿದ್ದಾರೆ. ತಿರುಪತಿಯಿಂದ ಕಳ್ಳ ದಂಪತಿ ಬೆಂಗಳೂರಿಗೆ ಬಂದಿದ್ದು, ಇಲ್ಲಿಂದ ಯಾವ ಕಡೆ ಹೋದರೆಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಸಿಸಿ ಟಿವಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಲಾಡ್ಜ್‍ಗಳಲ್ಲಿ ಅಳವಡಿಸಿರುವ ಸಿಸಿ ಟಿವಿಯ ಪುಟೇಜ್‍ಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಘಟನೆ ಹಿನ್ನೆಲೆ:

ಅನಂತಪುರ ಜಿಲ್ಲೆಯ ಸಾಯಿಪುರ ಗ್ರಾಮದ ವೆಂಕಟೇಶ್ ಎಂಬ ದಂಪತಿ ಮಕ್ಕಳೊಂದಿಗೆ ತಿರುಪತಿಯ ತಿರುಮಲದಲ್ಲಿರುವ ವೆಂಕಟೇಶ ದೇವಾಲಯಕ್ಕೆ ಬಂದಿದ್ದರು. ಛತ್ರದಲ್ಲೇ ಮಕ್ಕಳನ್ನು ಮಲಗಿಸಿ ದೇವರ ದರ್ಶನಕ್ಕೆ ಹೋಗಿದ್ದಾಗ ಕಳ್ಳ ದಂಪತಿ ಚನ್ನಕೇಶವಲು ಎಂಬ 10 ತಿಂಗಳ ಮಗುವನ್ನು ಎತ್ತಿಕೊಂಡಿ ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದೇವರ ದರ್ಶನ ಮುಗಿಸಿಕೊಂಡು ಬಂದಾಗ ಮಗು ಕಾಣೆಯಾಗಿರುವುದು ಕಂಡು ತಿರುಮಲ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ತನಿಖೆ ಕೈಗೊಂಡು ತಿರುಮಲದ ಸುತ್ತಮುತ್ತಲಿನ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದದ್ದು ನಂತರ ಖಾಸಗಿ ಬಸ್ ಹತ್ತಿರುವುದು ಗೊತ್ತಾಗಿದೆ. ಈ ಖಾಸಗಿ ಬಸ್‍ನ ಚಾಲಕನನ್ನು ವಿಚಾರಣೆ ನಡೆಸಿದಾಗ ಮಗುವನ್ನು ಎತ್ತಿಕೊಂಡಿದ್ದ ದಂಪತಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಇಳಿದುಕೊಂಡ ಮಾಹಿತಿ ಮೇರೆಗೆ ತಿರುಮಲ ಪೊಲೀಸರು ಬೆಂಗಳೂರಿಗೆ ಬಂದಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಳ್ಳ ದಂಪತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin