ಫಿನಾಯಿಲ್ ಕುಡಿದು ವೆಂಕಟ್ ಹುಚ್ಚಾಟ..!

ಈ ಸುದ್ದಿಯನ್ನು ಶೇರ್ ಮಾಡಿ

huchcha-venkat

ಬೆಂಗಳೂರು. ಜೂ.18 : ನಟ, ನಿರ್ದೇಶಕ ಹುಚ್ಚ ವೆಂಕಟ್ ತಮ್ಮ ತೋಟದ ಮನೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ. ಪ್ರೇಮ ವೈಫಲ್ಯದಿಂದ ತಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹುಚ್ಚ ವೆಂಕಟ್ ಮಾಧ್ಯಮದವರಿಗೆ ಮೆಸೇಜ್ ಮಾಡಿದ್ದು. ಹೊಸ ಹೈಡ್ರಾಮಾವನ್ನೇ ಸೃಷ್ಟಿಸಿದ್ದಾರೆ.   ಬೆಳಗ್ಗೆ 10ಗಂಟೆಗೆ ತಮ್ಮ ತಂದೆ ಜತೆ ತೋಟದ ಮನೆ ಸೇರಿದ್ದ ವೆಂಕಟ್ ತಾನು ಪ್ರೀತಿಸುತ್ತಿದ್ದ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದು ಫಿನಾಯಿಲ್ ಸೇವಿಸಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್ ನನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ಅಲ್ಲಿಯೂ ಚಿಕಿತ್ಸೆಗೆ ಸಹಕರಿಸದೇ ಹುಚ್ಚಾಟ  ಮಾಡಿ ಆಸ್ಪತ್ರೆಯಿಂದ ಓಡಿ ಹೋಗಿದ್ದಾರೆ,  ನಾನಾ ವಿವಾದಗಳು, ಹುಚ್ಚಾಟಗಳಿಂದಲೇ ಸ್ಯಾಂಡಲ್ ವುಡ್ ನಲ್ಲಿ  ಸುದ್ದಿ ಮಾಡೋ ವೆಂಕಟ್ ಈಗ ಹೊಸ ನಾಟಕವೊಂದನ್ನು ಆರಂಭಿಸಿದ್ದಾರೆ ಎನ್ನುತ್ತಿದ್ದಾರೆ ಹಲವರು, ಆದರೆ ಇದು ಪ್ರಚಾರದ  ಗಿಮಿಕ್ ಅಷ್ಟೇ ಎನ್ನುತ್ತಾರೆ ಬಲ್ಲವರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin