ಯೋಗ ದಿನಾಚರಣೆಗೆ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

Tumakur--1

ತುಮಕೂರು, ಜೂ.18- ವಿಶ್ವದ ಗಮನ ಸೆಳೆದಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೃಹತ್ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ದಿನಾಚರಣೆ ಸಮಿತಿಯ ಪ್ರಧಾನ ವ್ಯವಸ್ಥಾಪಕ ಮಲ್ಲಪ್ಪ ತಿಳಿಸಿದ್ದಾರೆ.  ಇದರ ಪೂರ್ವಭಾವಿಯಾಗಿ ಇಂದು ಸುಮಾರು 350ಕ್ಕೂ ಹೆಚ್ಚು ಜನರು ತಾಲೀಮು ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದೇ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಎಲ್ಲರೂ ಯೋಗ ಮಾಡಿದರೆ ಹೆಚ್ಚು ಕಾಲ ಆರೋಗ್ಯದಿಂದಿರಬಹುದು ಎಂದರು.

ಗೌರವಾಧ್ಯಕ್ಷ ಸಂಪಂಗಿರಾಮ್ ಮಾತನಾಡಿ, ಪ್ರತಿದಿನ ಮುಂಜಾನೆ ಆಯಾಯ ಶಾಖೆಗಳಲ್ಲಿ ಯೋಗ ಶಿಕ್ಷಣ ನಡೆಯುತ್ತಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಸದೃಢರಾಗಬೇಕು. ಪ್ರಧಾನಿ ನರೇಂದ್ರಮೋದಿಯವರ ಈ ಯಶಸ್ವಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಮಹೇಶ್, ರುದ್ರಮೂರ್ತಿ, ಚಂದ್ರಶೇಖರ್, ವಿನಯ್‍ಕುಮಾರ್, ರವೀಂದ್ರ ಸೇರಿದಂತೆ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin