ವೀಕೆಂಡ್ ಮೋಜಿಗೆ ಭಾರತ- ಪಾಕ್ ಕ್ರಿಕೆಟ್-ಹಾಕಿ ಪಂದ್ಯಗಳ ಮೆರಗು

ಈ ಸುದ್ದಿಯನ್ನು ಶೇರ್ ಮಾಡಿ

Ind-avs-Pakistna

ಬರ್ಮಿಂಗ್‍ಹ್ಯಾಮ್, ದಿ ಓವಲ್, ಜೂ. 19- ವೀಕೆಂಡ್ ಮೋಜಿನಲ್ಲಿರುವ ಕ್ರೀಡಾಭಿಮಾನಿಗಳ ಹುಮ್ಮಸ್ಸನ್ನು ಇಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಹಾಗೂ ಹಾಕಿ ಪಂದ್ಯಗಳು ದುಪ್ಪಟ್ಟು ಮಾಡಿದೆ.  ಒಂದೆಡೆ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳಲು ಶರ್ಫಾರಾಜ್‍ಖಾನ್ ಸಾರಥ್ಯದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಹಾಕಿ ವಲ್ರ್ಡ್ ಲೀಗೇಜ್‍ನ ಪ್ರಮುಖ ಪಂದ್ಯದಲ್ಲಿ ಕೆನಡಾ ತಂಡವನ್ನು ಸೋಲಿಸಿರುವ ಮನ್‍ಪ್ರೀತ್ ಸಿಂಗ್ ಬಳಗ ಕ್ವಾರ್ಟರ್‍ಫೈನಲ್‍ಗೇರಲು ಇಂದು ಪಾಕಿಸ್ತಾನದ ತಂಡದ ವಿರುದ್ಧ ಸಮರ ಸಾರಲು ಸಜ್ಜಾಗಿದೆ.

ಎರಡು ತಂಡಗಳು ಸ್ಟ್ರಾಂಗ್:

ಚಾಂಪಿಯನ್ಸ್ ಟ್ರೋಫಿಯ ಅಭ್ಯಾಸ ಪಂದ್ಯದಲ್ಲಿ ಜಯಭೇರಿ ಬಾರಿಸಿ ನಂತರ ಲೀಗ್‍ನಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ದ ಗೆಲುವು ಸಾಧಿಸಿ ಸೆಮಿಫೈನಲ್‍ನಲ್ಲಿ ಬಾಂಗ್ಲಾ ದೇಶ ತಂಡದ ವಿರುದ್ಧ ಜಯ ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿದ್ದರೆ, ಬಲಿಷ್ಠ ಪಾಕಿಸ್ತಾನ ತಂಡವು ಕೂಡ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಲೀಗ್‍ನಲ್ಲಿ ಭಾರತ ವಿರುದ್ಧ ಸೋತರೂ ನಂತರ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿ ಸೆಮಿಫೈನಲ್‍ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ ಫೈನಲ್‍ಗೇ ಲಗ್ಗೆ ಇಟ್ಟಿದ್ದು ಈಗ ಭಾರತ ತಂಡದವೊಡ್ಡುವ ಅಗ್ನಿಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದೆ.

ಹಾಕಿಯಲ್ಲೂ ಅದೇ ರಾಗ:

ಇನ್ನು ಹಾಕಿ ವಿಶ್ವಲೀಗ್‍ನಲ್ಲೂ ಕೂಡ ಈ ಎರಡೂ ತಂಡಗಳು ಕೂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಇದುವರೆಗೆ ಈ ಎರಡು ತಂಡಗಳು ತೋರಿರುವ ಪ್ರದರ್ಶನ ಇಂದಿನ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.  ವಿಶ್ವದ 6ನೇ ರ್ಯಾಂಕಿಂಗ್ ಹೊಂದಿರುವ ಮನ್‍ಪ್ರೀತ್‍ಸಿಂಗ್ ಸೇನೆಇದುವರೆಗೂ ಸ್ಕಾಟ್ಲೆಂಡ್ ಮತ್ತು ಕೆನಡಾ ವಿರುದ್ಧ ಜಯಭೇರಿ ಬಾರಿಸಿದ್ದು ಇಂದು 13ನೆ ರ್ಯಾಂಕಿಂಗ್‍ನ ಪಾಕ್ ತಂಡವನ್ನು ಮಣಿಸಲು ಸಜ್ಜುಗೊಂಡಿದೆ.   ಇನ್ನು ಪಾಕ್ ಕೂಡ ತಾನು ಇದುವರೆಗೂ ಆಡಿರುವ ನೆದರ್ಲೆಂಡ್ಸ್ ಮತ್ತು ಕೆನಡಾ ವಿರುದ್ಧ ಎರಡು ಪಂದ್ಯಗಳು ಸೋತಿದ್ದರೂ ಕೂಡ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿರವ ಕ್ವಾಟರ್‍ಫೈನಲ್‍ಗೇರಲು ಹರಸಾಹಸ ನಡೆಸಲಿದೆ.

ಒಟ್ಟಾರೆ ಇಂದು ಕ್ರೀಡಾಲೋಕದಲ್ಲಿ ಇಡೀ ದಿನ ಭಾರತ ಹಾಗೂ ಪಾಕಿಸ್ತಾನದ ದಿನವೆಂದೇ ಬಿಂಬಿಸಿದರೂ ಅತಿಶಯೋಕ್ತಿಯೇನಲ್ಲ . ಕೊಹ್ಲಿ ಪಡೆಯು ಶರ್ಫಾರಾಜ್ ತಂಡವನ್ನು ಮಣಿಸಿ 3ನೆ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಿ ಹಾಗೂ ಹಾಕಿ ವಿಶ್ವ ಲೀಗ್‍ನಲ್ಲಿ ಮನ್‍ಪ್ರೀತ್‍ಸಿಂಗ್ ಬಳಗ ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‍ಫೈನಲ್‍ಗೇರಿ ಈ ಬಾರಿಯ ವಿಶ್ವ ಲೀಗ್‍ನ ಮುಕುಟವನ್ನು ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin