ಖಾಲಿ ಉಳಿದಿದ್ದ ರಂಗಾಯಣ ನಿರ್ದೇಶಕರ ಹುದ್ದೆಗಳ ಭರ್ತಿ : ಉಮಾಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

Umashree--01

ಬೆಂಗಳೂರು, ಜೂ.19- ರಾಜ್ಯದಲ್ಲಿ ಖಾಲಿ ಉಳಿದಿದ್ದ ರಂಗಾಯಣ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.  ಸದಸ್ಯ ಎಚ್.ಎಂ.ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಹಲವು ವರ್ಷಗಳಿಂದ ರಂಗಾಯಣ ನಿರ್ದೇಶಕರ ಹುದ್ದೆಗಳು ಖಾಲಿ ಇದ್ದವು. ಮೈಸೂರು ರಂಗಾಯಣ ಭಗೀರತೀ ಕದಂ, ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್ ಹಾಗೂ ಕಲಬುರಗಿ ರಂಗಾಯಣಕ್ಕೆ ಮಹೇಶ್ ವಿ.ಪಾಟೀಲ್ ಅವರನ್ನು ನೇಮಿಸಲಾಗಿದೆ. ಧಾರವಾಡ ರಂಘಾಯಣದಲ್ಲಿ ಒಂದು ಹುದ್ದೆ ಖಾಲಿ ಇದ್ದು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಹೇಳಿದರು.

ಮೂರು ವರ್ಷಗಳಲ್ಲಿ ಒಟ್ಟು 80 ಸಭೆಗಳನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ 4 ರಂಗಾಯಣಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಬೇಕಾದರೆ ರಂಗ ಸಮಾಜ ತೀರ್ಮಾನಿಸಬೇಕು. ಅವರು ಶಿಫಾರಸು ಮಾಡಿದ ಹೆಸರುಗಳನ್ನು ಸರ್ಕಾರ ಪರಿಗಣಿಸಲಿದೆ ಎಂದರು.  ನಾಟಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ನಿರ್ದೇಶಕ ರನ್ನಾಗಿ ನೇಮಕ ಮಾಡಲಗುವುದು. ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ರಂಗಾಯಣಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇನ್ನು ಮುಂದೆ ಅಂತಹ ಪರಿಸ್ಥಿತಿ ಉದ್ಭವಿ ಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin