ಪರಿಷತ್‍ನಲ್ಲಿ ಪ್ರತಿಧ್ವನಿಸಿದ ಕ್ವಾರಿ ಮಾಲೀಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Session-001

ಬೆಂಗಳೂರು,ಜೂ.19- ಕಲ್ಲು ಗಣಿಗಾರಿಕೆಯ ಕ್ವಾರಿ ಮಾಲೀಕರು ಫ್ರೀಡಂಪಾರ್ಕ್‍ನಲ್ಲಿ ನಡೆಸುತ್ತಿರುವ ಪ್ರತಿಭಟನೆ ವಿಧಾನಪರಿಷತ್‍ನಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷದ ನಾಯಕ ಬಿ.ಎಸ್.ಈಶ್ವರಪ್ಪ ಕ್ವಾರಿ ಮಾಲೀಕರಿಗೆ ಜಿಲ್ಲಾಡಳಿತ ಅನಗತ್ಯ ಕಿರುಕುಳ ನೀಡಿ ಜಲ್ಲಿ ಕ್ರಷರ್ ನಡೆಸಲು ಅನುಮತಿ ನೀಡದ ಕಾರಣ ಜಲ್ಲಿ ಉದ್ಯಮ ಸ್ಥಗಿತವಾಗಿದೆ. ಇದರಿಂದ ರಸ್ತೆ, ಕಟ್ಟಡ, ಮನೆ ಕಾಮಗಾರಿಗಳು ನಿಂತುಹೋಗಿವೆ. ಲಕ್ಷಾಂತರ ಕಾರ್ಮಿಕರ ಬದುಕು ಅತಂತ್ರವಾಗಿದೆ.
ನಿಲುವಳಿ ಯೋಜನೆಯಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರಸ್ತಾಪಿಸಿದರು. ಆರು ಸಾವಿರಕ್ಕೂ ಹೆಚ್ಚು ಕ್ರಷರ್ ಮತ್ತು ಕ್ವಾರಿ ಮಾಲೀಕರು ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮರುಳು ಗಣಿಗಾರಿಕೆ ಅದ್ವಾನವಾಗಿದೆ. ಇದೀಗ ಕಲ್ಲು ಗಣಿಗಾರಿಕೆ ಸಮಸ್ಯೆ ಶುರುವಾಗಿದೆ. ಅವರಿಗೆ ಯಾಕೆ ಅನುಮತಿ ನೀಡುತ್ತಿಲ್ಲ, ಅವರ ಸಮಸ್ಯೆಯನ್ನು ಪರಿಹರಿಸುವಂತೆ ಅವರು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರು ಕಲ್ಲು ಗಣಿಗಾರಿಕೆ ಕುರಿತು ಹೊಸ ನೀತಿ ಪ್ರಕಾರ ಹಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಅದರಂತೆ ಸುರಕ್ಷತಾ ವಲಯ ತಗ್ಗಿಸಿ ಕೇಂದ್ರಕ್ಕೆ ಶಿಫಾರಸು ಮಾಡಿ ಮೂರು ತಿಂಗಳಾಗಿದೆ. ಕೇಂದ್ರ ಪ್ರಕರಣವನ್ನು ಇತ್ಯರ್ಥಪಡಿಸುವಲ್ಲಿ , ಅಧಿವೇಶನ ನಂತರ ದೆಹಲಿಗೆ ತೆರಳಿ ಕೇಂದ್ರ ನಾಯಕರ ಜೊತೆ ಚರ್ಚಿಸಿ ಜಲ್ಲಿ ಕ್ರಷರ್ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಪ್ರತಿಭಟನಾನಿರತ ಮುಖಂಡರು ಮತ್ತು ಪ್ರತಿಪಕ್ಷದ ನಾಯಕರ ಜೊತೆ ಇಂದು ಸಂಜೆಯೇ ಸಭೆ ನಡೆಸಿ ಸಮಸ್ಯೆಯು ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin