ವಿಧಾನಸಭೆಯಲ್ಲಿ ವಾದ್ರಾ ಪ್ರಕರಣ ಪ್ರಸ್ತಾಪ

ಈ ಸುದ್ದಿಯನ್ನು ಶೇರ್ ಮಾಡಿ

Session-001

ಬೆಂಗಳೂರು, ಜೂ.19- ಐಎಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರ ಅವರಿಗೆ ಸಂಬಂಧಿಸಿದ ಡಿಎಲ್‍ಎಫ್ ಸಂಸ್ಥೆ ಬನ್ನೇರುಘಟ್ಟ ಬಳಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪದ ಚರ್ಚೆಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಚರ್ಚೆಗೆ ಪಟ್ಟು ಹಿಡಿದರು.  ವಿಧಾನಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿ ಜಗದೀಶ್ ಶೆಟ್ಟರ್, ಡಿಎಲ್‍ಎಫ್ ಸಂಸ್ಥೆ 60 ಎಕರೆ ಜಮೀನಿನಲ್ಲಿ ದೊಡ್ಡ ಸಮುಚ್ಚಯ ನಿರ್ಮಿಸಿದೆ. ಜತೆಗೆ ಬನ್ನೇರುಘಟ್ಟ ಬಳಿ ಗುಂಡ್ಲುತೋಪು, ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು ಸಮುಚ್ಚಗಳನ್ನು ನಿರ್ಮಿಸುತ್ತಿದೆ. ಇದು ಕಾನೂನು ಬಾಹೀರ. ಸರ್ಕಾರಕ್ಕೂ ನಷ್ಟವಾಗಿದೆ.

ಈ ಬಗ್ಗೆ ಚರ್ಚೆ ಮಾಡಲು ನಿಲುವಳಿ ಸೂಚನೆಯಡಿ ನಾನು ಸೂಚನೆ ಕಳುಹಿಸಿದ್ದೆ. ಆದರೆ, ಅದನ್ನು ಸಭಾಧ್ಯಕ್ಷರು ತಿರಸ್ಕರಿಸಿದ್ದು, ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲೇ ಇರುವ ಕೆರೆ ಅಧ್ಯಯನ ಸದನ ಸಮಿತಿಯು ಈ ವಿಷಯದ ಬಗ್ಗೆ ಪರಿಶೀಲಿಸಲಿದೆ ಎಂಬ ಉತ್ತರ ನೀಡಿದ್ದಾರೆ. ಈ ವಿಷಯ ಕೆರೆ ಅಧ್ಯಯನ ಸಮಿತಿಯ ವ್ಯಾಪ್ತಿಗೆ ಒಳಪಡುವುದಿಲ್ಲ.   ಯಾವುದಾದರೂ ನಿಯಮದಡಿ ಚರ್ಚೆಗೆ ಅವಕಾಶ ನೀಡಿ ಎಂದು ಶೆಟ್ಟರ್ ಮನವಿ ಮಾಡಿದರು.
ಇದನ್ನು ಪರಿಶೀಲಿಸುವುದಾಗಿ ಸಭಾಧ್ಯಕ್ಷ ಕೋಳಿವಾಡ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin