50,000 ಗ್ರಾಮಗಳಲ್ಲಿ ಶೌಚಾಲಯವೇ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Toilet--01

ನವದೆಹಲಿ, ಜೂ.19- ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನದಡಿ ಎರಡು ಲಕ್ಷ ಗ್ರಾಮಗಳನ್ನು ಬಯಲು ಶೌಚಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದ್ದು, ಈ ಪೈಕಿ ಸುಮಾರು 50 ಸಾವಿರ ಗ್ರಾಮಗಳ ಯಾವುದೆ ಮನೆಗಳಲ್ಲಿ ಶೌಚಾಲಯವೇ ಇಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.  ಕೇಂದ್ರ ಸರ್ಕಾರವೇ ನಿರ್ವಹಿಸುವ ಸಮಗ್ರ ಅಂಕಿಅಂಶಗಳಿಂದ ಈ ವಿಚಾರ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳು ತಕ್ಷಣ ಶೌಚಾಲಯ ಕುರಿತ ಅಂಕಿಅಂಶಗಳನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಸೂಚನೆ ನೀಡಿದೆ.

ಪ್ರತೀ ಮನೆಗಳಲ್ಲಿ ಶೌಚಾಲಯ ಇದ್ದರೆ ಮಾತ್ರ ಅಂಥ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಿಸಲಾಗುತ್ತದೆ. ದೇಶದ ಒಟ್ಟು 6,05,828 ಗ್ರಾಮಗಳ ಪೈಕಿ ಶೇಕಡ 33ನ್ನು ಈಗಾಗಲೇ ಬಯಲು ಶೌಚಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ ಎಂದು ಸಚಿವಾಲಯ ರಾಜ್ಯಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ.  2,00,959 ಬಯಲು ಶೌಚಮುಕ್ತ ಗ್ರಾಮಗಳ ಪೈಕಿ 52,593 ಗ್ರಾಮಗಳಲ್ಲಿ ಶೇಕಡ 100ರಷ್ಟು ಮನೆಗಳಲ್ಲಿ ಶೌಚಾಲಯ ಇಲ್ಲ ಎಂದು ಐಎಂಐಎಸï ಅಂಕಿಅಂಶ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಡಳಿತಗಳು ತಕ್ಷಣ ಸಮಗ್ರ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಪರಿಷ್ಕರಿಸುವಂತೆ ಸೂಚಿಸಬೇಕು ಎಂದು ಆದೇಶ ನೀಡಿದೆ. ಈ ತಿಂಗಳ ಕೊನೆಯ ಒಳಗಾಗಿ ಮಾಹಿತಿ ಪರಿಷ್ಕರಿಸುವಂತೆ ಗಡುವು ವಿಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin