ಮೈಸೂರಿನಲ್ಲಿ 60,000 ಯೋಗ ಪಟುಗಳಿಂದ ‘ಗಿನ್ನಿಸ್ ಯೋಗ’

ಈ ಸುದ್ದಿಯನ್ನು ಶೇರ್ ಮಾಡಿ

Yoga-Mysuru--01

ಮೈಸೂರು, ಜೂ.21- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿಂದು ಗಿನ್ನಿಸ್ ದಾಖಲೆಗಾಗಿ 60 ಸಾವಿರ ಮಂದಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಸಿದರು. ನಗರದ ರೇಸ್‍ಕೋರ್ಸ್ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಇಂದು ಬೃಹತ್ ಯೋಗಪಟುಗಳು ಒಂದೇ ವೇದಿಕೆಯಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಸಾಕ್ಷಿಯಾಯಿತು.  ಇಂದು ಮುಂಜಾನೆ 5 ಗಂಟೆಗೆ ಸಾವಿರಾರು ಯೋಗಪಟುಗಳು ಆಗಮಿಸಿದ್ದರು. 300 ಮಂದಿಗೆ ಒಂದು ಬ್ಲಾಕ್ ಮಾಡಿ ಪ್ರತಿ ಬ್ಲಾಕ್‍ಗೂ ಪ್ರವೇಶ ದ್ವಾರ ಕಲ್ಪಿಸಲಾಯಿತು. ಸಾರ್ವಜನಿಕರು, ವಿಐಪಿ, ಯೋಗ ಪಟುಗಳಿಗೆ ಪ್ರತ್ಯೇಕ ಪ್ರವೇಶದ ಬ್ಲಾಕ್ ವ್ಯವಸ್ಥೆ ಮಾಡಲಾಯಿತು.

ಯೋಗಪಟುಗಳಿಗೆ ಬಾರ್‍ಕೋಡ್ ಟಿಕೆಟ್ ನೀಡಲಾಯಿತು. ಟಿಕೆಟ್ ಪಡೆದ ಯೋಗ ಪಟುಗಳು ನಿಗದಿತ ದ್ವಾರದ ಮೂಲಕ ತೆರಳಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡರು. ಹೀಗಾಗಿ ಎಷ್ಟು ಮಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ ಎಂಬುದರ ಬಗ್ಗೆ ಲೆಕ್ಕ ಕೂಡ ಸಿಗಲಿದೆ.
ಮೂರು ಬಾರಿ ಶಂಖನಾದ ಹಾಗೂ ಪ್ರಾರ್ಥನೆಯೊಂದಿಗೆ ಬೆಳಗ್ಗೆ 7ಕ್ಕೆ ಯೋಗ ಪ್ರದರ್ಶನ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹಾದೇವಪ್ಪ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದಸರು.

ಗಿನ್ನಿಸ್ ದಾಖಲೆಗಾಗಿ ಮೂರು ಸುತ್ತುಗಳಲ್ಲಿ ಯೋಗಾಭ್ಯಾಸ ನಡೆಯಿತು. ಮೊದಲೆರಡು ಸುತ್ತು ವೀಕ್ಷಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಟ್ಟರು. ಮೂರನೆ ಸುತ್ತಿನಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ. ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳಾದ ಆರ್‍ಬಿಐ ಜನರಲ್ ಮ್ಯಾನೇಜರ್ ಎಚ್.ಎಫ್.ಠಾಕೂರ್ ದೇಸಾಯಿ, ನಿವೃತ್ತ ಐಎಫ್‍ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ್. ಕುಮಾರ್‍ಪಾಲ್ ಅವರನ್ನೊಳಗೊಂಡ ತಂಡ ಯೋಗ ಪಟುಗಳ ಪ್ರದರ್ಶನ ಹಾಗೂ ಸಂಖ್ಯೆಯನ್ನು ದಾಖಲಿಸಿಕೊಂಡರು.

ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಯೋಗ ಪಟುಗಳು ಆಗಮಿಸಿದ್ದರು. ಅಲ್ಲದೆ, ವಿದೇಶಿ ಯೋಗ ಪಟುಗಳು ಸಹ ಪಾಲ್ಗೊಂಡಿದ್ದರು.  ಯೋಗ ಪ್ರದರ್ಶನದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ಪ್ರತಾಪ್ ಸಿಂಹ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್, ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಮೇಯರ್ ರವಿಕುಮಾರ್, ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.  ದೆಹಲಿಯ ರಾಜ್‍ಪಥ್‍ನಲ್ಲಿ 33,900 ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈ ದಾಖಲೆ ಅಳಿಸಿ ಹಾಕಲು ಮೈಸೂರಿನಲ್ಲಿ ಸಾವಿರಾರು ಮಂದಿ ಯೋಗಪಟುಗಳು ಯೋಗ ಪ್ರದರ್ಶನ ನಡೆಸಿದಸರು.

ಮೂರು ದಿನಗಳ ಹಿಂದೆಯಷ್ಟೇ ಅರಮನೆ ಆವರಣದಲ್ಲಿ 9 ಸಾವಿರ ಮಂದಿ ಯೋಗ ಚೈನ್ ಮೂಲಕ ಕೆಲವು ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಇದೀಗ 60 ಸಾವಿರ ಯೋಗ ಪಟುಗಳು ಯೋಗ ಪ್ರದರ್ಶಿಸಿ ಮತ್ತೊಂದು ದಾಖಲೆ ಬರೆಯಲು ಮೈಸೂರು ಸಾಕ್ಷಿಯಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin