ಯೋಗ ಉಚಿತ ಆರೋಗ್ಯವಿಮೆ ಇದ್ದಂತೆ : ಪ್ರಧಾನಿ ಮೋದಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Yoga--c01

ಲಕ್ನೋ, ಜೂ. 21-ಯೋಗ ಉಚಿತ ಆರೋಗ್ಯ ವಿಮೆ ಇದ್ದಂತೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಅಗಾಧ ಸಾಮಥ್ರ್ಯವಿರುವ ಯೋಗವು ಇಡೀ ವಿಶ್ವವನ್ನು ಒಂದಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ರಾಮಬಾಯಿ ಅಂಬೇಡ್ಕರ್ ಮೈದಾನದಲ್ಲಿ ಇಂದು ಬೆಳಗ್ಗೆ ತೃತೀಯ ಅಂತಾರಾಷ್ಟೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಬೃಹತ್ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಸಾಂಪ್ರಾದಯಿಕ ಆಚರಣೆಯಾದ ಯೋಗಾಭ್ಯಾಸವು ಪ್ರತಿಯೊಬ್ಬರ ಜೀವನದ ಭಾಗವಾಗಬೇಕೆಂದು ಕರೆ ನೀಡಿದರು.

ಧರ್ಮ, ಮತ-ಪಂಥಗಳು, ಭಾಷೆಗಳು ಮತ್ತು ಸಾಂಸ್ಕøತಿಕ ಅಡೆತಡೆಗಳಿಲ್ಲದೇ ವಿಶ್ವದ ಎಲ್ಲ ದೇಶಗಳನ್ನು ಒಗ್ಗೂಡಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸಿದೆ. ಭಾಷೆ, ಪರಂಪರೆ ಅಥವಾ ಸಂಸ್ಕøತಿ ಬಗ್ಗೆ ತಿಳಿಯದ ಅನೇಕ ರಾಷ್ಟ್ರಗಳು ಯೋಗದ ಮೂಲಕ ಭಾರತದೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಇಡೀ ಜಗತ್ತನ್ನು ಒಂದಾಗಿಸುವಲ್ಲಿ ಯೋಗದ ಪಾತ್ರ ಮಹತ್ತರವಾದುದು ಎಂದು ಪ್ರಧಾನಿ ವಿಶ್ಲೇಷಿಸಿದರು.   ಈ ಹಿಂದೆ, ಹಿಮಾಲಯ ಪರ್ವತದಲ್ಲಿ ಋಷಿ-ಮುನಿಗಳು, ಸಾಧು-ಸಂತರಿಗೆ ಮಾತ್ರ ಸೀಮಿತವಾಗಿದ್ದ ಯೋಗ ಈಗ ಪ್ರತಿಯೊಬ್ಬರ ಜೀವನದ ಒಂದು ಮುಖ್ಯಭಾಗವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ದೈಹಿಕವಾಗಿ ಸದೃಢವಾಗಿರುವ ಜೊತೆಗೆ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಸ್ವಾಸ್ಥ್ಯ ಮತ್ತು ಸೌಖ್ಯತೆ ಗಳಿಸಬಹುದು. ಯೋಗ ಒಂದು ರೀತಿಯ ಉಚಿತ ಆರೋಗ್ಯ ವಿಮೆ ಇದ್ದಂತೆ. ಇದನ್ನು ಯಾರೂ ಬೇಕಾದರೂ ಹೊಂದಬಹುದು. ಅಲ್ಲದೇ ಇದನ್ನು ಅಭ್ಯಾಸ ಮಾಡಲು ದುಬಾರಿಯಂತೂ ಅಲ್ಲವೇ ಅಲ್ಲ ಎಂದು ಮೋದಿ ಬಣ್ಣಿಸಿದರು.   ಬಿಳಿ ಟಿ-ಶರ್ಟ್ ಮತ್ತು ಸಡಿಲ ಷರಾಯಿ ಧರಿಸಿದ್ದ ಮೋದಿ, ಮುಂಜಾನೆಯೇ ಮೋಡ ಕವಿದ ವಾತಾವರಣದಲ್ಲಿ 50,000ಕ್ಕೂ ಹೆಚ್ಚು ಯೋಗ ಪಟುಗಳೊಂದಿಗೆ ಆಸನಗಳನ್ನು ಹಾಕಿ ಗಮನ ಸೆಳೆದರು. ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಗಣ್ಯರು ಸಹ ಯೋಗ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin