ಶಾಸಕರ ಭವನದಲ್ಲಿ ಯೋಗಾಭ್ಯಾಸ ಮಾಡಿದ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

Yoiga--0001

ಬೆಂಗಳೂರು, ಜೂ.21- ಪಕ್ಷಭೇದ ಮರೆತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಸಕರ ಭವನದಲ್ಲಿ ಶಾಸಕರು ಯೋಗಾಭ್ಯಾಸ ನಡೆಸಿದರು. ಶಾಸಕರ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸ ಧ್ಯಕ್ಷ ಕೆ.ಬಿ.ಕೋಳಿವಾಡ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್‍ನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಸವರಾಜಹೊರಟ್ಟಿ, ಸಿ.ಟಿ.ರವಿ, ಕೋನರೆಡ್ಡಿ, ಜಯಮ್ಮ, ವೀಣಅಚ್ಚಯ್ಯ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.
Yoga--c002

ಸ್ಪೀಕರ್ ಕೋಳಿವಾಡ ಅವರು ಪೂರ್ಣಪ್ರಮಾಣದಲ್ಲಿ ಯೋಗಭ್ಯಾಸದಲ್ಲಿ ತೊಡಿಗಿಕೊಳ್ಳಲು ಸಾಧ್ಯವಾಗದೆ ಕುರ್ಚಿಯಲ್ಲೇ ಕುಳಿತು ಸುಲಭ ಸಾಧ್ಯವಾದ ಆಸನಗಳನ್ನು ಮಾಡಿದರು. ಯೋಗ ಗುರು ನಾಗರಾಜ್ ಅವರು ಯೋಗಾಸನಾಗಳ ಕುರಿತು ಮಾರ್ಗದರ್ಶನ ನೀಡಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿಯಿಂದಾಗಿ ಇಂದು ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ. ಭಾರತದ ಮೂಲ ಕಲೆಯಾದ ಯೋಗವನ್ನು 176 ದೇಶಗಳು ಒಪ್ಪಿಕೊಳ್ಳುವ ಮೂಲಕ ಅನುಸರಿಸುತ್ತಿವೆ. ಅಷ್ಟೂ ದೇಶಗಳಲ್ಲಿ ಇಂದು ಯೋಗ ದಿನಾಚರಣೆ ನಡೆಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರಿಗೆ ಭಾರತ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.

Yoga--c001

ಯೋಗದಿಂದಾಗಿ ಮನಸ್ಸು ಮತ್ತು ದೇಹ ಸಮತೋಲನದಲ್ಲಿರುತ್ತದೆ. ಎಲ್ಲ ರೋಗಗಳನ್ನು ನಿಯಂತ್ರಿಸಲು ಸಾಧ್ಯ. ಆರೋಗ್ಯ ಮತ್ತು ಚಟುವಟಿಕೆಯಿಂದಿರಲು ಯೋಗ ಸಹಕಾರಿ ಎಂದು ಹೇಳಿದರು.  ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಯೋಗ ಮಾಡುತ್ತಿದ್ದೇನೆ. ಅದಕ್ಕಾಗಿ ನನಗೆ ಬಿಪಿ, ಶುಗರ್ ಯಾವುದೂ ಬಂದಿಲ್ಲ. ಒಂದು ವೇಳೆ ಯಾರಾದರು ನನ್ನ ತಂಟೆಗೆ ಬಂದರೆ ಅವರಿಗೆ ಬಿಪಿ, ಶುಗರ್ ಬರಲಿದೆ ಎಂದರು.

Yoga--c004

ನಾನು ಆರ್‍ಎಸ್‍ಎಸ್‍ನ ಕಟ್ಟ ಕಾರ್ಯಕರ್ತನಾಗಿದ್ದು, ಅಲ್ಲಿಂದ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.
ಬಸವರಾಜಹೊರಟ್ಟಿ ಮಾತನಾಡಿ, ನನಗೀಗ 70 ವರ್ಷ. ಈವರೆಗೂ ಆಸ್ಪತ್ರೆಗೆ ದಾಖಲಾಗಿಲ್ಲ. ನಾನು ನಡೆಯಲು ಶುರು ಮಾಡಿದರೆ ನನ್ನ ಸರಿಸಮನಾಗಿ ನಡೆಯಲು ಯುವಕರು ಕಷ್ಟಪಡುವಂತೆ ವೇಗವಾಗಿ ನಡೆಯುತ್ತೇನೆ, ಇದೆಲ್ಲ ಸಾಧ್ಯವಾಗಿರುವುದು ನಿರಂತರ ಯೋಗಭ್ಯಾಸದಿಂದ ಎಂದರು.
ಸುಮಾರು 40 ವರ್ಷಗಳಿಂದಲೂ ನಾನು ಯೋಗ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾನು ಶಿಕ್ಷಣ ಸಚಿವನಾಗಿದ್ದಾಗ ಯೋಗ ಪ್ರ ಶಿಕ್ಷಣವನ್ನು ಶಾಲಾ -ಕಾಲೇಜುಗಳಲ್ಲಿ ಕಲಿಸಲು ಕ್ರಮ ಕೈಗೊಂಡಿದ್ದೆ. ಅದೇ ಪರಿಪಾಠವನ್ನು ಶಿಕ್ಷಣ ಇಲಾಖೆ ಮುಂದುವರೆಸಬೇಕು. ವಿದ್ಯಾರ್ಥಿ ದಿಸೆಯಿಂದಲೂ ಯೋಗ ಕಲಿಯುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದರು.

Yoga--c003

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin