ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದೇ ಇದ್ದಾಗ ರೇವಣ್ಣ ಗೊಳೋ ಎಂದು ಅತ್ತಿದ್ದರಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

Revanna-CM-Siddaramaiaha

ಬೆಂಗಳೂರು, ಜೂ.21-ಜೆಡಿಎಸ್‍ನ ಎಚ್.ಡಿ.ರೇವಣ್ಣ ನನಗೆ ಮೊದಲಿಂದಲೂ ಆತ್ಮೀಯ 1996ರಲ್ಲಿ ನಾನು ಮುಖ್ಯಮಂತ್ರಿ ಆಗದೇ ಇದ್ದಾಗ ಗೊಳೋ ಎಂದು ಅತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಎಚ್.ಡಿ.ರೇವಣ್ಣ ಮಾತನಾಡಿಲ್ಲ. ಈ ತಿಂಗಳು ಒಳ್ಳೆಯ ದಿನಗಳು ಇಲ್ಲ. ಅದಕ್ಕಾಗಿ ರೇವಣ್ಣ ಅಧಿವೇಶನಕ್ಕೆ ಬಂದಿಲ್ಲ ಎಂದು ಛೇಡಿಸಿದರು.  ಅದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ನೀವು ಮುಖ್ಯಮಂತ್ರಿ ಆದ ಮೇಲೆ ರೇವಣ್ಣ ಮಾತನ್ನು ಕಡಿಮೆ ಮಾಡಿದ್ದಾರೆ. ಹಿಂದೆ ನಾನು ವಿಧಾನಸಭಾಧ್ಯಕ್ಷನಾಗಿದ್ದಾಗ ಪ್ರತಿಯೊಂದಕ್ಕೂ ಎದ್ದು ನಿಂತು ಮಾತ ನಾಡುತ್ತಿದ್ದರು ಎಂದರು.

ಆಗ ಕುಮಾರಸ್ವಾಮಿ ಇರಲಿಲ್ಲ. ರೇವಣ್ಣ ಮಾತನಾಡಬೇಕಿತ್ತು. ಈಗ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಮರ್ಥಿಸಿಕೊಂಡರು.
ದೊಡ್ಡವರು ಮಾತಾಡ್ಲಿ ಅಂತ ಬಿಟ್ಟುಬಿಟ್ಟಿದ್ದೀವಿ ಸಾರ್ ಎಂದು ರೇವಣ್ಣ ಹೇಳಿದರು. ರೇವಣ್ಣ ನನಗೆ ಮೊದಲಿನಿಂದಲೂ ಆತ್ಮೀಯ ಎಂದು ಹೇಳಿದ ಸಿದ್ದರಾಮಯ್ಯ, ಅವರು ಅಲ್ವಾ ರೇವಣ್ಣ ಒಪ್ಪಿಕೊಳ್ಳುತ್ತೀಯೋ ಇಲ್ಲವೋ ಎಂದು ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin