ಎನ್‍ಕೌಂಟರ್‍ನಲ್ಲಿ 3 ಕುಖ್ಯಾತ ಲಷ್ಕರ್ ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Encounter-----0252'

ಶ್ರೀನಗರ, ಜೂ.22-ಕಾಶ್ಮೀರ ಕಣಿವೆ ಭಾರತೀಯ ಯೋಧರು ಮತ್ತು ಪಾಕಿಸ್ತಾನ ಪೋಷಿತ ಭಯೋತ್ಪಾದಕರ ರಣರಂಗವಾಗುತ್ತಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇಂದು ಮುಂಜಾನೆ ಯೋಧರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಯ ಮೂವರು ಕುಖ್ಯಾತರು ಹತರಾಗಿದ್ದಾರೆ. ಎನ್‍ಕೌಂಟರ್‍ನಲ್ಲಿ ಬಲಿಯಾದವರು ಸರಣಿ ಕಗ್ಗೊಲೆಗಳಿಗೆ ಕಾರಣವಾಗಿದ್ದ ಭಯೋತ್ಪಾದಕರಾಗಿದ್ದಾರೆ.

ಹತರಾದ ಉಗ್ರರಲ್ಲಿ ಮಜೀದ್ ದರ್, ಕಾಕಾಪೋರಾದ ಸರ್‍ಪಂಚ್ ಮತ್ತು ಪುಲ್ವಾಮದ ರಾಜಕೀಯ ಮುಖಂಡನೊಬ್ಬನ ಹತ್ಯೆ ಸೇರಿದಂತೆ ಹಲವಾರು ಕೊಲೆಗಳಲ್ಲಿ ಭಾಗಿಯಾಗಿದ್ದ ಎಂದು ಹಿರಿಯ ಅಧಿಕಾರಿಗಳು ಶ್ರೀನಗರದಲ್ಲಿ ತಿಳಿಸಿದ್ದಾರೆ.   ಪುಲ್ವಾಮದ ಕಾಕಾಪೋರಾ ಪ್ರದೇಶದಲ್ಲಿ ಮೂವರು ಲಷ್ಕರ್ ಉಗ್ರರು ಮನೆಯಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಯೋಧರು ನಿನ್ನೆ ಸಂಜೆ ಆ ಪ್ರದೇಶವನ್ನು ಸುತ್ತುವರಿದಿದ್ದರು. ಈ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದರು. ಆಗ ನಡೆದ ಗುಂಡಿನ ಚಕಮಕಿ ಆರು ತಾಸುಗಳ ಕಾಲ ಮುಂದುವರಿಯಿತು. ನಂತರ ಆ ಮೂವರನ್ನು ಹೊಡೆದುರುಳಿಸುವಲ್ಲಿ ಯೋಧರು ಸಫಲರಾದರು. ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮುದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಜೀದ್ ದರ್ ಸೇರಿದಂತೆ ಸ್ಥಳೀಯರಾದ ಈ ಮೂವರು ಲಷ್ಕರ್ ಸಂಘಟನೆಗೆ ಸೇರಿ ಸರಣಿ ಹತ್ಯೆಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.   ಪುಲ್ವಾಮದಲ್ಲಿ ಈ ವರ್ಷ ನಡೆದ ಮೊದಲ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಇದಾಗಿದೆ. ಪುಲ್ಮಾಮದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಸ್ಥಳೀಯರ ವ್ಯವಸ್ಥಿತ ಜಾಲದೊಂದಿಗೆ ಉಗ್ರರು ಈ ಜಿಲ್ಲೆಯಲ್ಲಿ ನೆಲೆಸಿದ್ದಾರೆಂಬ ಮಾಹಿತಿ ಮೇಲೆ ನಡೆದ ಕಾರ್ಯಾಚರಣೆ ಸಫಲವಾಗಿದೆ. ಇದರಿಂದ ಎಲ್‍ಇಟಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅರ್ವಿನ್ ಜಿಲ್ಲೆಯಲ್ಲಿ ಜೂ.17ರಂದು ಸೇನಾಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಕಮಾಂಡರ್ ಜುನೈದ್ ಮಟ್ಟೂ ಹಾಗೂ ಇನ್ನಿಬ್ಬರು ಉಗ್ರರು ಹತರಾಗಿದ್ದರು.   ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಸಪೋರ್‍ನಲ್ಲಿ ನಿನ್ನೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin