ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ ‘ಐಫಲ್ ಟವರ್’

ಈ ಸುದ್ದಿಯನ್ನು ಶೇರ್ ಮಾಡಿ

Eiffel-tower

ಮೈಸೂರು, ಜೂ.22- ಜಗತ್‍ಪ್ರಸಿದ್ಧ ಐಫಲ್ ಟವರ್ ನೋಡಲು ಪ್ಯಾರಿಸ್‍ಗೆ ಹೋಗಬೇಕಾಗಿಲ್ಲ. ಸಾಂಸ್ಕøತಿಕ ನಗರಿ ಮೈಸೂರಿಗೆ ಭೇಟಿ ನೀಡಿದರೆ ಐಫಲ್ ಗೋಪುರ ನೋಡಬಹುದು. ನಗರದ ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಐಫಲ್ ಗೋಪುರ ನಿರ್ಮಾಣವಾಗುತ್ತಿದ್ದು, ಇನ್ನು ಎರಡು ದಿನಗಳೊಳಗೆ ಸಾರ್ವಜನಿಕರಿಗೆ ನೋಡಲು ಅವಕಾಶ ನೀಡಲಾಗುವುದು.  ನ್ಯಾಷನಲ್ ಕನ್ಸೂಮರ್ ಫೇರ್ ಸಂಶ್ಥೆಯು ಐಫಲ್ ಗೋಪುರ ನಿರ್ಮಾಣ ಕಾಮಗಾರಿ ಜವಾಬ್ದಾರಿ ಹೊತ್ತಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ 90 ಅಡಿ ಎತ್ತರದ ಗೋಪುರ 20 ಟನ್ ಉಕ್ಕು, ಕಬ್ಬಿಣದಿಂದ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೆಲಸ ಭರದಿಂದ ಸಾಗಿದೆ.

90 ಅಡಿ ಎತ್ತರ, 50 ಚದರ ಅಡಿಯಲ್ಲಿ ಐಫಲ್ ಗೋಪುರ ನಿರ್ಮಾಣ ಕಾರ್ಯದಲ್ಲಿ ಎಂಜಿನಿಯರ್, ತಂತ್ರಜ್ಞರು ಸೇರಿದಂತೆ 700ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಗೋಪುರಕ್ಕೆ 3ಡಿ ಪೇಂಟಿಂಗ್, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ಬಗೆಯ ಅಲಂಕಾರ ನಡೆಯುತ್ತಿದೆ. ಈಗಾಗಲೇ ಗೋಪುರದ ಕೆಲಸ 90ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.  ಗಪುರದ ಆವರಣದ ಸಮೀಪ ಜ್ಯುವೆಲರಿ, ಆಟೋ ಮೊಬೈಲ್, ಫುಡ್‍ಕೋಟ್, ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ 4.30ರಿಂದ ರಾತ್ರಿ 9.30ರ ವರೆಗೂ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin