`ಸರ್ವಂ ಪ್ರೇಮಂ’

ಈ ಸುದ್ದಿಯನ್ನು ಶೇರ್ ಮಾಡಿ

dsagasdfgsdfh

ಸ್ಯಾಂಡಲ್‍ವುಡ್‍ನಲ್ಲಿ ಹಲವಾರು ಯುವ ಪ್ರತಿಭೆಗಳು ತಮ್ಮ ಸಿನಿಮಾ ನಿರ್ಮಾಣ-ನಿರ್ದೇಶನದ ಕನಸನ್ನು ನನಸು ಮಾಡಿಕೊಳ್ಳಲು ತುದಿಗಾಲಲ್ಲಿ ಇರುತ್ತಾರೆ. ಆ ರೀತಿ ಬಂದಂತಹ ಯುವ ಪ್ರತಿಭೆ ಶಿವರಾಜ್. ಅವರ ಸಾರಥ್ಯದಲ್ಲಿ ಸರ್ವಂ ಪ್ರೇಮಂ ಎಂಬ ವಿನೂತನ ಪ್ರೇಮಕಥೆ ಹೊಂದಿದ ಚಿತ್ರ ಮೊನ್ನೆ ಆರಂಭವಾಯಿತು. ಈ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‍ನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಶಿವರಾಜ್, ಪ್ರಭಾಕರ್ ಮತ್ತು ಅಶ್ವತ್ಥ ನಾರಾಯಣ್ ಅವರ ನಿರ್ಮಾಣವಿದೆ. ಸರ್ವಂ ಪ್ರೇಮಂ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ದೇಶಕರಾದ ತಿಪಟೂರು ರಘು ಮತ್ತು ಎಸ್.ಕೆ. ಭಗವಾನ್ ಹಾಜರಿದ್ದು ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

ಇದರ ಹೆಸರೇ ಹೇಳುವಂತೆ ಸರ್ವಂ ಪ್ರೇಮಂ ಎಂಬ ವಾಕ್ಯವನ್ನು ನಾಯಕ ಅಕ್ಷರಶಃ ಪಾಲಿಸುತ್ತಿರುತ್ತಾನೆ. ಒಬ್ಬ ಸಿವಿಲ್ ಎಂಜಿನಿಯರ್ ಆಗಿರುವ, ಎಲ್ಲದರಲ್ಲಿಯೂ ಪ್ರೀತಿಯನ್ನು ಹುಡುಕುವ ಸ್ವಭಾವದ ಈತನ ಕಣ್ಣಿಗೆ ಒಮ್ಮೆ ಅನಾಥಾಶ್ರಮದ ಶಿಕ್ಷಕಿಯೊಬ್ಬಳು ಬೀಳುತ್ತಾಳೆ. ಮುಂದೆ ಅನೇಕ ತಿರುವುಗಳ ನಡುವೆ ಅವರ ಜೀವನ ಕುತೂಹಲಭರಿತವಾಗಿ ಸಾಗುತ್ತದೆ. ಸೆಂಟಿಮೆಂಟ್, ಲವ್, ಆ್ಯಕ್ಷನ್ ಹೀಗೆ ಎಲ್ಲಾ ಥರದ ಕಮರ್ಷಿಯಲ್ ಅಂಶಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ನಿರ್ದೇಶಕರು ಹೇಳಿದರು.

ಈ ಚಿತ್ರದಲ್ಲಿ ನಾಯಕನಾಗಿ ಯುವನಟ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಸುಹಾನ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಶೋಭ್‍ರಾಜ್, ಶ್ರೀನಿವಾಸ ಪ್ರಭು, ನರೇಂದ್ರ ಬಾಬು ಮೊದಲಾದ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಯುವ ಸಂಗೀತ ನಿರ್ದೇಶಕ ಲೋಕಿ ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಯ ಮಲ್ಲಿಕಾರ್ಜುನ್ ಅವರ ಸಂಭಾಷಣೆ, ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣವಿದೆ.   ಕೆ.ಜಿ.ಎಫ್, ಬಳ್ಳಾರಿ, ಹೊಸಪೇಟೆ, ಮಡಿಕೇರಿ ಮತ್ತು ಬೆಂಗಳೂರು ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲು ಪ್ಲಾನ್ ಹಾಕಿಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin