ಡಿವೈಎಸ್ಪಿ ಹತ್ಯೆ : ಇನ್ನೂ ಮೂವರ ಬಂಧನ, ಎಸ್ಪಿ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

DYSP--01

ಶ್ರೀನಗರ, ಜೂ.24-ದೇಶವೇ ಬೆಚ್ಚಿ ಬಿದ್ದಿದ್ದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯನಿರತ ಡಿವೈಎಸ್ಪಿ ಮೊಹ ಮ್ಮದ್ ಅಯೂಬ್ ಪಂಡಿತ್ ಅವರ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಗುರುವಾರ ಮಧ್ಯರಾತ್ರಿ ಶ್ರೀನಗರದ ನೌಹಟ್ಟದಲ್ಲಿ ರುವ ಜಾಮಿಯಾ ಮಸೀದಿ ಬಳಿ ಉದ್ರಿಕ್ತ ಗುಂಪೊಂದು ಕರ್ತವ್ಯ ನಿರತ ಡಿವೈಎಸ್ಪಿ ಮೊಹಮ್ಮದ್ ಅಯೂಬ್ ಅವರನ್ನು ವಿವಸ್ತ್ರಗೊಳಿಸಿ ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಈ ಸಂಬಂಧ 12 ಮಂದಿಯನ್ನು ಗುರುತಿಸಿ, ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು. ಇಂದು ಇನ್ನೂ ಮೂವ ರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಎಸ್.ಪಿ. ವೈದ್ ತಿಳಿಸಿದ್ದಾರೆ.

ಈಗಾಗಲೇ ಬಂಧಿತರನ್ನು ವಿಚಾರಣೆಗೊಳಪಡಿಸಿದ್ದು, ಸಂಪೂರ್ಣ ಮಾಹಿತಿ ದೊರೆತ ನಂತರ ಘಟನೆಯ ಸತ್ಯಾತತೆ ತಿಳಿಯಲಿದೆ. ಅತಿ ಶೀಘ್ರದಲ್ಲೇ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.   ಘಟನೆಯ ಹಿನ್ನೆಲೆಯಲ್ಲಿ ಈ ಪ್ರದೇಶದ ಪೊಲೀಸ ವರಿಷ್ಠಾಧಿಕಾರಿ(ಉತ್ತರ ಶ್ರೀನಗರ) ಸಜದ್ ಖಾಲಿಖ್ ಅವರನ್ನು ಕರ್ತವ್ಯಲೋಪದ ಮೇರೆಗೆ ಎತ್ತಂಗಡಿ ಮಾಡಲಾಗಿದೆ. ಈ ಸಂಬಂಧ ನಿನ್ನೆ ತಡರಾತ್ರಿ ಡಿಜಿಪಿ ಎಸ್.ಪಿ.ವೈದ್ ಆದೇಶ ಹೊರಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin