ಮದುವೆಯಾಗಲು ನಿರಾಕರಿಸಿದ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವತಿ..!

ಈ ಸುದ್ದಿಯನ್ನು ಶೇರ್ ಮಾಡಿ

Private-Part--001

ನವದೆಹಲಿ,ಜೂ.24-ಮದುವೆಯಾಗಲು ನಿರಾಕರಿಸಿದ ಗೆಳೆಯನ ಜನನಾಂಗಗಳನ್ನು ಕತ್ತರಿಸಿದ 23 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಗೆಳೆಯ ರವಿ(35)ಯನ್ನು ಸಂಜಯ್ ಗಾಂಧಿ ಮೆಮೋರಿಯಲ್  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರವಿಗೆ ಸಂಬಂಧಿಯೊಬ್ಬರು 11.30ಗಂಟೆಗೆ ಕರೆ ಮಾಡಿ, ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿರುವ ಗೆಳತಿಯ ಮನೆಗೆ ತೆರಳುವಂತೆ ಮಾಹಿತಿ ನೀಡಿದ್ದು, ಅದರಂತೆ ಗೆಳತಿ ಮೆನಗೆ ಹೋದಾಗ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿ ಗೆಳೆತಿಯ ಮನೆಗೆ ಬಂದಾಗ ಆಕೆ ವಿವಾಹದ ಪ್ರಸ್ತಾವನೆ ಮುಂದಿಟ್ಟಿದ್ದಾಳೆ. ಆದರೆ, ನನ್ನ ಕುಟುಂಬ ವಿರುದ್ಧವಾಗಿದ್ದರಿಂದ ವಿವಾಹ ಸಾಧ್ಯವಿಲ್ಲ ಎಂದು ರವಿ ಆಕೆಯ ಕೋರಿಕೆಯನ್ನು ತಿರಸ್ಕರಿಸಿದ್ದಾನೆ.   ಓಲೈಸುವ ನೆಪದಲ್ಲಿ ಆಕೆ ಪ್ರಿಯತಮ ರವಿಯನ್ನು ಬಾತ್‍ರೂಮ್‍ಗೆ ಕರೆದುಕೊಂಡು ಹೋಗಿ ಆತನನ್ನು ವಿವಸ್ತ್ರಗೊಳಿಸಿ ಲೈಂಗಿಕತೆಗೆ ಒತ್ತಾಯಿಸಿದ್ದಾಳೆ. ಆತನ ನಿರಾಕರಣೆಯಿಂದಾಗಿ ಕೋಪಗೊಂಡ ಯುವತಿ, ಅಡುಗೆ ಮನೆಯಲ್ಲಿದ್ದ ಚಾಕುನಿಂದ ಅತನ ಜನನಾಂಗಗಳನ್ನು ಕತ್ತರಿಸಿ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಆಕೆಯ ಸಹೋದರ ಮತ್ತು ಅತ್ತಿಗೆ ಮನೆಯಲ್ಲಿದ್ದರು. ಆದಾಗ್ಯೂ ಮಹಿಳೆ ಆಕ್ರಮಣ ಮಾಡುವುದನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ರವಿ ಆರೋಪಿಸಿದ್ದಾನೆ.   ಜನನಾಂಗ ಕತ್ತರಿಸಿದ ನಂತರ, ರವಿ ಸಹಾಯಕ್ಕಾಗಿ ಕೂಗುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾನೆ. ಕೂಡಲೇ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿ ರವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಅವರನ್ನು ಜೈಪುರಗಗಗ ಗೋಲ್ಡನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರವಿ ವಾಸಿಸುತ್ತಿರುವ ಮನೆಯಿಂದ ಕೂಗಳತೆಯ ದೂರಿನಲ್ಲಿಯೇ ಮಹಿಳೆ ಮನೆಯಿದೆ. ಘಟನೆಯ ನಂತರ ಮಹಿಳೆ ಮತ್ತು ಆಕೆಯ ಕುಟುಂಬದವರು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin