ಮೈಸೂರಿನಲ್ಲೊಂದು ಮರ್ಯಾದಾ ಹತ್ಯೆ..?

ಈ ಸುದ್ದಿಯನ್ನು ಶೇರ್ ಮಾಡಿ

Honor-Killing

ಮೈಸೂರು, ಜೂ.25- ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪಾರ್ವತಿಪುರದಲ್ಲಿ ಮರ್ಯಾದೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪಾರ್ವತಿಪುರದ ಶೋಭಾ (19) ಎಂಬ ಯುವತಿ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದು, ಈಕೆಯ ಪ್ರಿಯಕರ ಪೊಲೀಸರಿಗೆ ದೂರು ನೀಡಿದ್ದಾನೆ. ಶೋಭಾಳನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಕೃಷ್ಣ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಇವರ ಮದುವೆಗೆ ಪೋಷಕರು ನಿರಾಕರಿಸಿದ್ದರಿಂದ ಇವರಿಬ್ಬರು ಹೊರಗೆ ಹೋಗಿ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು.

ಮೂರು ತಿಂಗಳ ಹಿಂದೆ ನಾವಿಬ್ಬರೂ ನಡೆದುಹೋಗುತ್ತಿದ್ದಾಗ ನಮಗೆ ಎದುರಾದ ಯುವತಿಯ ತಂದೆ ಗುರುಸಿದ್ದೇಗೌಡ ಕೆಲವರನ್ನು ಕರೆತಂದು ನಮ್ಮ ಮೇಲೆ ಮನಬಂದಂತೆ ಹಲ್ಲೆ ಮಾಡಿ ಯುವತಿಯನ್ನು ಕರೆದೊಯ್ದಿದ್ದು, ಅಂದಿನಿಂದ ಇದುವರೆಗೂ ಯುವತಿಯ ಸುಳಿವಿಲ್ಲ. ಆಕೆ ತನ್ನ ಮನೆಯಲ್ಲೂ ಇಲ್ಲ. ತಂದೆಯೇ ಕೊಲೆ ಮಾಡಿ ಮುಚ್ಚಿಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ನೊಂದ ಯುವಕ ಸರಗೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ಅಂದಿನಿಂದ ಇದುವರೆಗೂ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಕೃಷ್ಣ ಪೊಲೀಸರಲ್ಲಿ ಮನವಿ ಮಾಡಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin