ಸಾವಿರ ಕಿ.ಮೀ ಪಾದಯಾತ್ರೆ ಆರಂಭಿಸಿದ ಶಾಸಕ ವೈ.ಎಸ್.ವಿ.ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

Datta--01

ಕಡೂರು, ಜೂ.25-ಕಡೂರು ವಿಧಾನಸಭಾ ಕ್ಷೇತ್ರದ 224 ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಸಾವಿರ ಕಿ.ಮೀ ಉದ್ದದ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ. ಜಿ.ಯರದಕೆರೆ ಗ್ರಾಮದ ಹಾಲೋಕುಳಿ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ 2006ರಿಂದಲೂ ಹಲವಾರು ಬಾರಿ ಪಾದಯಾತ್ರೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ರೈತರಲ್ಲಿ ಆತ್ಮಸ್ಥೈರ್ಯ ತುಂಬಲು, ಗ್ರಾಮಗಳ ಸಮಸ್ಯೆ ತಿಳಿಯಲು ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ದಿಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ. ಈ ಪಾದಯಾತ್ರೆ ದಾಖಲೆಯಾಗಲಿದೆ, 49 ಗ್ರಾಮ ಪಂಚಾಯತಿಗಳ ಮುಖ್ಯ ಗ್ರಾಮಗಳಿಗೆ ಭೈೀಟಿ ನೀಡುವ ಮೂಲಕ ಶೆ. 90 ಗ್ರಾಮಗಳ ವೀಕ್ಷಣೆ ಕಾರ್ಯ ನಡೆಯಲಿದೆ, ಸಮಸ್ಯೆಗಳಿಗೆ ಗ್ರಾಮಗಳಲ್ಲೇ ಕೂತು ಚರ್ಚಿಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ದೇವಾಲಯದ ಆವರಣದಲ್ಲಿ ಶಾಸಕ ವೈ.ಎಸ್.ವಿ. ದತ್ತ ಅವರ 64ನೇ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳಿಂದ ಹಮ್ಮಿಕೊಳ್ಳಲಾಗಿತ್ತು, ಶಾಸಕರು ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.  ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಭಂಡಾರಿಶ್ರೀನಿವಾಸ್, ಎಂ. ರಾಜಪ್ಪ, ವೈ.ಎಸ್. ರವಿಪ್ರಕಾಶ್, ಸೀಗೇಹಡ್ಲು ಹರೀಶ್, ಶೂದ್ರಶ್ರೀನಿವಾಸ್, ಎನ್. ಇಮಾಮ್, ಯಾಸಿನ್, ಅಬ್ಬು, ಶಂಕರಪ್ಪ, ಚೌಡಪ್ಪ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin