ನೈರುತ್ಯ ಚೀನಾದಲ್ಲಿ ಭಾರೀ ಪ್ರವಾಹ, ಭೂಕುಸಿತದಿಂದ 34 ಸಾವು, 93 ಮಂದಿ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

China--Flood

ಬೀಜಿಂಗ್, ಜೂ.26- ನೈರುತ್ಯ ಚೀನಾದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ 34 ಮಂದಿ ಮೃತಪಟ್ಟು, 93ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರಕೃತಿ ವಿಕೋಪದಲ್ಲಿ 4.50 ಲಕ್ಷ ಜನ ಸಂತ್ರಸ್ತರಾಗಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಸಿಚುವಾನ್ ಪ್ರಾಂತ್ಯದಲ್ಲಿ ಭೂಕುಸಿತದಿಂದ ಬಂಡೆಗಳು ಮತ್ತು ಮಣ್ಣಿನ ಅಡಿ ಸಿಲುಕಿರುವ 93 ಜನರ ರಕ್ಷಣೆಗಾಗಿ 3,000ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಸಾಕಷ್ಟು ಮಂದಿ ಭಗ್ನಾವಶೇಷಗಳ ಕೆಳಗೆ ಸಿಲುಕಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಬಾದ ಟಿಬೆಟ್ ಮತ್ತು ಕ್ವಿಯಾಂಗ್ ಮುಖಜ ಭೂಮಿಯಲ್ಲಿರುವ ಮಾವೋಕ್ಸಿಯಾನ್ ಕೌಂಟಿಯ ಕ್ಸಿನ್‍ಮೋ ಗ್ರಾಮದಲ್ಲಿ 65ಕ್ಕೂ ಹೆಚ್ಚು ಮನೆಗಳು ಭೂಕುಸಿತದಿಂದ ಸಮಾಧಿಯಗಿವೆ. ಈ ದುರಂತದ ನಂತರ ನದಿಯ ಒಂದು ಭಾಗದ ಎರಡು ಕಿ.ಮೀ. ಮಾರ್ಗ ಮುಚ್ಚಿ ಹೋಗಿದ್ದು, 1,600 ಮೀಟರ್ ರಸ್ತೆ ಮಣ್ಣಿನಲ್ಲಿ ಹೂತು ಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin