ಅತ್ಯಾಚಾರದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Rape--1

ಕಲಬುರಗಿ, ಜೂ.27- ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾ.23ರಂದು ಕಲಬುರಗಿ ಕೇಂದ್ರ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾಗಿದ್ದರು. ಇವರ ಪೈಕಿ ಒಬ್ಬಾತ ಸ್ವ ಇಚ್ಛೆಯಿಂದ ಜೈಲಿಗೆ ವಾಪಸಾಗಿದ್ದ.   ಅತ್ಯಾಚಾರ ಪ್ರಕರಣದಲ್ಲಿ ತಾಜೋದ್ದೀನ್ ವಿಚಾರಣಾಧೀನ ಕೈದಿಯಾಗಿದ್ದು, ಅಂದು ತಪ್ಪಿಸಿಕೊಂಡಿದ್ದನು. ಫರಹತ್ತಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ರಾತ್ರಿ ನಗರದ ಹೊರವಲಯದ ನಾಗನಹಳ್ಳಿ ಬಳಿ ಈತ ಇರುವ ಬಗ್ಗೆ ಮಾಹಿತಿ ತಿಳಿದು ಹಿಡಿಯಲು ಹೋದಾಗ ಆತ ತಲವಾರ್‍ನಿಂದ ಪೊಲೀಸರ ಮೇಲೆ ಪ್ರತಿದಾಳಿ ಮಾಡಿದ್ದಾನೆ.

ತಕ್ಷಣ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಕಾನ್ಸ್‍ಟೆಬಲ್ ರಘುವೀರ್ ಕೈಗೆ ಗಂಭೀರ ಗಾಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin