ಥೈಲೆಂಡ್ ಮತ್ತು ಮ್ಯಾನ್ಮಾರ್‍’ನಲ್ಲಿ 800 ಕೋಟಿ ಡಾಲರ್ ಮೌಲ್ಯದ ಡ್ರಗ್ಸ್ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

Thailand,-Myanmar

ಬ್ಯಾಂಕಾಕ್, ಜೂ. 27-ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಥೈಲೆಂಡ್ ಮತ್ತು ಮ್ಯಾನ್ಮಾರ್‍ಗಳಲ್ಲಿ 800 ಕೋಟಿ ಡಾಲರ್‍ಗಳಿಗೂ ಅಧಿಕ ಮೌಲ್ಯದ ಡ್ರಗ್ಸ್‍ಅನ್ನು ಅಧಿಕಾರಿಗಳು ಬೆಂಕಿ ಹಚ್ಚಿ ಸುಟ್ಟು ಹಾಕುವ ಮೂಲಕ ನಿನ್ನೆ ವಿಶ್ವಸಂಸ್ಥೆಯ ಮಾದಕದ್ರವ್ಯ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಥೈಲೆಂಡ್‍ನ ಅಯುಥಾಯ ಪ್ರಾಂತ್ಯದಲ್ಲಿ 590 ದಶಲಕ್ಷ ಡಾಲರ್‍ಗಳಿಗೂ ಅಧಿಕ ಬೆಲೆಬಾಳುವ 9 ಟನ್ ಡ್ರಗ್ಸ್‍ಗೆ ಕೊಳ್ಳಿ ಇಡಲಾಯಿತು.

ಮಲೇಷ್ಯಾ ಮತ್ತಿತರ ದೇಶಗಳಿಂದ ಥೈಲೆಂಡ್‍ಗೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವ ಹಲವಾರು ವ್ಯವಸ್ಥಿತ ಜಾಲಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿರುವುದಾಗಿ ದೇಶದ ಮಾದಕದ್ರವ್ಯ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿ ಸಿರಿನ್ಯ ಸಿತಿಚಾಯ್ ತಿಳಿಸಿದ್ದಾರೆ. ನೆರೆಯ ದೇಶವಾದ ಮಾನ್ಯಾರ್‍ನಲ್ಲೂ ವಶಪಡಿಸಿಕೊಳ್ಳಲಾದ 217 ದಶಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ನ್ನು ಸುಟ್ಟು ಹಾಕಿರುವುದಾಗಿ ಪೊಲೀಸರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin