ಬೆಂಗಳೂರಲ್ಲಿ ಕೆಂಪೇಗೌಡ ಜಯಂತಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Kempegowda--01

ಬೆಂಗಳೂರು, ಜೂ.27- ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿರುವ ಕೆಂಪೇಗೌಡ ಜಯಂತಿಗೆ ನಗರದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ನಾಲ್ಕು ಗಡಿ ಗೋಪುರಗಳಿಂದ ಹೊರಟ ಕೆಂಪೇಗೌಡರ ಜ್ಯೋತಿ ಮೆರವಣಿಗೆಯಲ್ಲಿ ಸ್ವಾಮೀಜಿಗಳು, ಸಾಹಿತಿಗಳು, ಜನಾಂಗದ ಪ್ರಮುಖರು, ಜನಪ್ರತಿನಿಧಿಗಳು, ಸಿನಿಮಾ ನಟರು ಪಾಲ್ಗೊಂಡಿದ್ದರು. ಒಕ್ಕಲಿಗರ ಸಂಘದಿಂದ ಹೊರಟ ಮೆರವಣಿಗೆಯಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವದೂತ ಶ್ರೀಗಳು ಪಾಲ್ಗೊಂಡಿದ್ದರು.

ಬೆಳ್ಳಿರಥದಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಇಟ್ಟು ನಾಡಹಬ್ಬ ದಸರಾ ಮಾದರಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕೆಂಪಾಬುಂದಿಕೆರೆ ಗಡಿ ಗೋಪುರ, ಲಾಲ್‍ಬಾಗ್ ಗಡಿ ಗೋಪುರ, ಹಲಸೂರು ಗಡಿ ಗೋಪುರ, ಮೇಕ್ರಿ ವೃತ್ತದ ಬಳಿ ಇರುವ ಗಡಿ ಗೋಪುರದಿಂದ ಮೆರವಣಿಗೆ ನಡೆಸಲಾಯಿತು.  ಮೇಕ್ರಿ ವೃತ್ತದ ಬಳಿಯ ರಮಣಶ್ರೀ ಪಾರ್ಕ್‍ನಲ್ಲಿರುವ ಕೆಂಪೇಗೌಡರ ಗಡಿ ಗೋಪುರಕ್ಕೆ ಇಂದು ವಿಶೇಷ ಪೂಜೆ ಸಲ್ಲಿಸಿ ಬೃಹತ್ ಕೆಂಪೇಗೌಡರ ಪುತ್ಥಳಿಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, ನಟರಾದ ಪುನೀತ್‍ರಾಜ್‍ಕುಮಾರ್, ಜಗ್ಗೇಶ್, ಶಾಸಕ ಡಾ.ಅಶ್ವತ್ಥನಾರಾಯಣ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿದರು.

shhjuo

ಈ ಸಂದರ್ಭದಲ್ಲಿ ಮಾತನಾಡಿದ ನಟ ಪುನೀತ್‍ರಾಜ್‍ಕುಮಾರ್, ಸರ್ಕಾರದ ವತಿಯಿಂದ ಮೊದಲ ಬಾರಿಗೆ ಕೆಂಪೇಗೌಡರ ಜಯಂತಿ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ. ನಮ್ಮ ಬಡಾವಣೆಯಲ್ಲೇ ದೊಡ್ಡ ಪ್ರಮಾಣದ ಕೆಂಪೇಗೌಡರ ಪುತ್ಥಳಿ ಇರುವುದು ಸಂತಷ ಉಂಟು ಮಾಡಿದೆ ಎಂದರು.
ಕೆಂಪೇಗೌಡರ ಜನ್ಮ ಸ್ಥಳವಾದ ಆವತಿಯಿಂದ ಹೊರಟ ಜ್ಯೋತಿ ಮೆರವಣಿಗೆ ದೇವರಹಳ್ಳಿಯ ಮೂಲಕವಾಗಿ ಸ್ವಾತಂತ್ರ್ಯ ಉದ್ಯಾನವನ್ನು ತಲುಪಿತು. ನಗರದ ನಾಲ್ಕೂ ಗಡಿ ಗೋಪುರಗಳಿಂದ ಬಂದ ಜ್ಯೋತಿ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಳ್ಳಲಾಯಿತು. ಮೆರವಣಿಗೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು. ನಂತರ ಸ್ವಾತಂತ್ರ್ಯ ಉದ್ಯಾನವನದಿಂದ ಜಾನಪದ ಕಲಾಮೇಳದೊಂದಿಗೆ ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧವನ್ನು ತಲುಪಲಾಯಿತು.

dgasdfhgdfhj

ಸ್ಮಾರ್ಟ್‍ಸಿಟಿ ಯೋಜನೆ:

ಹಲಸೂರಿನ ಗಡಿ ಗೋಪುರದಿಂದ ಹೊರಟ ಕೆಂಪೇಗೌಡರ ಜಾಥಾಗೆ ಚಾಲನೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೆಲವು ಆಯ್ದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.  ನಾಡಪ್ರಭು ಕೆಂಪೇಗೌಡರು ನಾಲ್ಕು ದಿಕ್ಕುಗಳಲ್ಲಿ ಗಡಿ ಗೋಪುರ ನಿರ್ಮಾಣ ಮಾಡಿ ಬೆಂಗಳೂರು ನಿರ್ಮಿಸಿದ್ದರು. ಆದರೆ, ಇಂದು ನಗರ ಎಲ್ಲೆ ಮೀರಿ ಬೆಳೆದಿದೆ. ಹೀಗಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಪಣತೊಟ್ಟಿದೆ ಎಂದರು.

ಹಿಂದೆ ಬೆಂಗಳೂರು ಕೆರೆ ನೀರನ್ನೇ ಅವಲಂಭಿಸಿತ್ತು. ಆದರೆ, ಇಂದು ಕೆರೆಗಳಿಗೆ ತ್ಯಾಜ್ಯ ಮತ್ತು ಒಳಚರಂಡಿ ನೀರು ಹರಿಯಬಿಡಲಾಗುತ್ತಿದೆ. ಇನ್ನು ಮುಂದೆ ಕೆರೆಗಳಿಗೆ ತ್ಯಾಜ್ಯ ಹರಿಯದಂತೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲಾಲ್‍ಬಾಗ್‍ನಿಂದ ಹೊರಟ ಜ್ಯೋತಿ ಯಾತ್ರೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ರಾಜ್ಯಸಭಾ ಸದಸ್ಯ ರಾಜೀವ್‍ಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ರವಿ, ಬಿಬಿಎಂಪಿ ಮಾಜಿ ಸದಸ್ಯ ಉದಯ್‍ಶಂಕರ್ ಮತ್ತಿತರರು ಸಾಥ್ ನೀಡಿದರು.  ಕೆಂಪಾಬುದಿ ಕೆರೆಯಿಂದ ಹೊರಟ ಮೆರವಣಿಗೆಗೆ ವಸತಿ ಸಚಿವ ಎಂ.ಕೃಷ್ಣಪ್ಪ ಚಾಲನೆ ನೀಡಿದರು. ಶಾಸಕರಾದ ಆರ್.ವಿ.ದೇವರಾಜ್, ಪಿ.ಆರ್.ರಮೇಶ್, ಮುನಿರತ್ನ, ಮಾಜಿ ಶಾಸಕರಾದ ಕೆ.ಚಂದ್ರಶೇಖರ್, ವಿ.ಆರ್.ಸುದರ್ಶನ್, ಬಿಬಿಎಂಪಿ ಸದಸ್ಯ ರಮೇಶ್ ಮತ್ತಿತರರು ಕೆಂಪೇಗೌಡರ ವೇಷಭೂಷಣ ತೊಟ್ಟ ಕುಲಬಾಂಧವರೊಂದಿಗೆ ಹೆಜ್ಜೆ ಹಾಕಿದರು.

ಕುರುಬರಹಳ್ಳಿ ವೃತ್ತದಲ್ಲಿರುವ ಗೆಳೆಯರ ಬಳಗ ಒಕ್ಕಲಿಗರ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಕೆ.ಗೋಪಾಲಯ್ಯ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ನಿರ್ಮಾಪಕ ಸಾ.ರಾ.ಗೋವಿಂದು, ಸಂಗೀತ ನಿರ್ದೇಶಕ ಹಂಸಲೇಖ, ವೇದಿಕೆ ಅಧ್ಯಕ್ಷ ಸಿ.ರಾಮು, ಉಪಾಧ್ಯಕ್ಷ ಟಿ.ಚನ್ನಪ್ಪ, ಬಿಬಿಎಂಪಿ ಸದಸ್ಯ ಭದ್ರೇಗೌಡ ಮತ್ತಿತರರು ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಕೆಂಪೇಗೌಡರ ಭಾವಚಿತ್ರದೊಂದಿಗೆ ನೂರಾರು ಕುಲಬಾಂಧವವರು, ವೇದಿಕೆ ಪದಾಧಿಕಾರಿಗಳು ಸ್ವಾತಂತ್ಯ ಉದ್ಯಾನವನದವರೆಗೆ ಶಾಂತಿಯುತ ಮೆರವಣಿಗೆ ನಡೆಸಿದರು.

gasgdh

ಜಯಂತಿ ಅಂಗವಾಗಿ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬನಶಂಕರಿ, ಬಸವನಗುಡಿ, ವಿಲ್ಸನ್‍ಗಾರ್ಡನ್, ಬ್ಯಾಟರಾಯನಪುರ, ವಿಜಯನಗರ, ದೇವನಹಳ್ಳಿ, ಯಲಹಂಕ, ಪೀಣ್ಯ, ಕಾಮಾಕ್ಷಿಪಾಳ್ಯದ ಒಕ್ಕಲಿಗರ ಸಂಘಟನೆಗಳು ಮೆರವಣಿಗೆ ಮೂಲಕ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿದವು.  ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಹಾಸನ ಮತ್ತಿತರ ಕಡೆಗಳಿಂದಲೂ ಆಗಮಿಸಿದ್ದ ಸಾವಿರಾರು ಕುಲಬಾಂಧವರು ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಂಡು ಪುನೀತರಾದರು.

ಪಠ್ಯದಲ್ಲಿ ಕೆಂಪೇಗೌಡರ ಪಾಠವಿಲ್ಲದರಿವುದು ವಿಷಾದನೀಯ: ಡಿವಿಎಸ್

ಬೆಂಗಳೂರು, ಜೂ.27- ನಾಡು ಕಟ್ಟಿದ ನಾಡಪ್ರಭು ಕೆಂಪೇಗೌಡರ ಇತಿಹಾಸ ಪಠ್ಯಪುಸ್ತಕದಲ್ಲಿ ಅಳವಡಿಸದಿರುವುದು ವಿಷಾದನೀಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೇಕ್ರಿವೃತ್ತದಿಂದ ಆರಂಭವಾದ ಕೆಂಪೇಗೌಡ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಐದು ದಶಕಗಳ ಹಿಂದೆ ಬೆಂಗಳೂರು ನಿರ್ಮಿಸಿದ ನಿರ್ಮಾಪಕನ ಇತಿಹಾಸವನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸದಿರುವುದು ನಾಡಿನ ದುರಂತ ಎಂದು ಬಣ್ಣಿಸಿದರು.

Kempegowda-Jayanthi-231adfj

2018ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಆಗ ನಾಡಪ್ರಭುವಿನ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು ಎಂದು ಸದಾನಂದಗೌಡರು ಭರವಸೆ ನೀಡಿದರು.  ಐದು ದಶಕಗಳ ಹಿಂದೆಯೇ ಸ್ಮಾರ್ಟ್‍ಸಿಟಿ ಯೋಜನೆಯ ಬಗ್ಗೆ ಕೆಂಪೇಗೌಡರಿಗೆ ಅರಿವಿತ್ತು. ಹೀಗಾಗಿಯೇ ಅವರು ನಗರದೆಲ್ಲೆಡೆ ಕೆರೆಕುಂಟೆಗಳನ್ನು ಸ್ಥಾಪಿಸುವುದರ ಜತೆಗೆ ಪರಿಸರ ಕಾಪಾಡುವ ಬಗ್ಗೆ ಕಾಳಜಿ ಹೊಂದಿದ್ದರು.  ಆದರೆ, ಇಂದಿನ ಪೀಳಿಗೆ ಪರಿಸರ ನಾಶ ಮಾಡಿ ಇಡೀ ಬೆಂಗಳೂರು ಅವನತಿಯತ್ತ ಸಾಗುವಂತೆ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ. ನಾಡಪ್ರಭು ಕೆಂಪೇಗೌಡರ ಆಡಳಿತಾತ್ಮಕ ಸೂತ್ರವನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಬೆಂಗಳೂರನ್ನು ಶಕ್ತಿಶಾಲಿ ನಗರವನ್ನಾಗಿ ಮಾಡಬಹುದು ಎಂದರು.

 

 

Kempegowda-Jayanthi-10

 

Kempegowda-Jayanthi-231ag

Kempegowda-Jayanthi-231dgdf

Kempegowda-Jayanthi-23121gf

Kempegowda-Jayanthi-24242

Kempegowda-Jayanthi-231211

Kempegowda-Jayanthi-2312144

Kempegowda-Jayanthi-2312424

Kempegowda-Jayanthigdhf

Kempegowda-Jayanthigdhf1212

Kempegowda-Jayanthigdnghdfj

sagagdh

sdghdfhjou

sfhsdghfghj

 

 

shwghtjryfj

 

Facebook Comments

Sri Raghav

Admin