ಮೋದಿ-ಟ್ರಂಪ್ ಮುಖಾಮುಖಿ ಹೇಗಿತ್ತು..? ಪ್ರಮುಖ ಬೆಳವಣಿಗಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Modi

ವಾಷಿಂಗ್ಟನ್. ಜೂ.27 : ಜೂನ್ 27ರಂದು ಭಾರತೀಯ ಕಾಲಮಾನ ರಾತ್ರಿ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ವಿಶ್ವವೇ ಎದುರು ನೋಡುತ್ತಿರುವ ಈ ಭೇಟಿಯ ವೇಳೆ ಹ್ಯಾಂಡ್ ಶೇಕ್ ಮಾಡಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಮೂಲಕ ಆತ್ಮೀಯತೆಯನ್ನು ಪ್ರದರ್ಶಿಸಿದರು. ಮೋದಿ ಅಮೆರಿಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದರೂ, ಇದು ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ಭೇಟಿ. ಕಳೆದ ವರ್ಷ ಒಬಾಮ ಅಮೇರಿಕಾದ ಅಧ್ಯಕ್ಷರಾಗಿದ್ದಾಗ ಮೋದಿಗೆ ಭವ್ಯ ಸ್ವಾಗತ ಸಿಕ್ಕಿತ್ತು, ಅದೇ ರೀತಿ ಈ ಬಾರಿಯೂ ಟ್ರಂಪ್ ಮೋದಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಉಭಯ ನಾಯಕರು ಮುಂದಾಗಿದ್ದಾರೆ.


ಟ್ರಂಪ್ ಹೇಳಿದ್ದೇನು..?

ಡೊನಾಲ್ಡ್ ಟ್ರಂಪ್ ಅವರು, ಮೋದಿ ಅವರ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಗಮನಾರ್ಹವಾಗಿ ಪ್ರಗತಿಯನ್ನು ಕಂಡಿದೆ. ಮೋದಿ ಭಾರತದ ಉತ್ತಮ ಪ್ರಧಾನಿಗಳಲ್ಲೊಬ್ಬರು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಮುಕ್ತಕಂಠದಿಂದ ಮೋದಿಯವರನ್ನು ಶ್ಲಾಘಿಸಿದರು.  ಅಮೆರಿಕ ಅತ್ಯುತ್ಕೃಷ್ಟ ಮಿಲಿಟರಿ ಸಾಧನಗಳನ್ನು ತಯಾರಿಸುತ್ತಿದ್ದು, ಅಮೆರಿಕದಂತೆ ಬೇರೆ ಯಾವ ರಾಷ್ಟ್ರವೂ ತಯಾರಿಸುವುದಿಲ್ಲ. ಭಾರತ ಅವುಗಳಿಗಾಗಿ ಬೇಡಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ನುಡಿದರು. ಭಾರತಕ್ಕೆ ಅಮೆರಿಕ 365 ಮಿಲಿಯನ್ ಡಾಲರ್ ನಷ್ಟು ಸಿ-17 ಮಿಲಿಟರಿ ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟನ್ನು ಮಾರಾಟ ಮಾಡಿದೆ. ಜೊತೆಗೆ, 2 ಬಿಲಿಯನ್ ಡಾಲರ್ ನಷ್ಟು ಡ್ರೋಣ್ ಗಳನ್ನು ಕೂಡ ಭಾರತಕ್ಕೆ ಅಮೆರಿಕ ಮಾರಾಟ ಮಾಡಲಿದೆ. ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಅತ್ಯಂತ ಬಲಿಷ್ಠವಾಗಿದೆ ಮತ್ತು ಹಲವಾರು ಸಂಗತಿಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಸಹಮತ ಹೊಂದಿವೆ ಎಂದು ಟ್ರಂಪ್ ಹೇಳಿದರು.

ee639d9d-a9f2-4a85-adad-5af70fddacfe
ಮೋದಿ ಮಾತು :

ಭಾರತ ಮತ್ತು ಅಮೆರಿಕ ಒಂದಾಗಿ ಸಾಗಿದಾಗ ಅದರ ಲಾಭ ಜಗತ್ತಿಗೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಮೋದಿ ಲೇಖನ ಪ್ರಕಟವಾಗಿದ್ದು, 2016 ರ ಜೂನ್ ನಲ್ಲಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್(ಸಂಸತ್) ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿಕೊಂಡಿರುವ ಅವರು, 1 ವರ್ಷದ ಬಳಿಕ ಮತ್ತೆ ವಾಷಿಂಗ್ಟನ್ ಗೆ ಬಂದಿದ್ದೇನೆ. ಎರಡೂ ದೇಶಗಳು ಇನ್ನಷ್ಟು ಹತ್ತಿರವಾಗಿವೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕದ ಸಂಬಂಧಗಳು ಆಳವಾಗಿ ಬೇರೂರತೊಡಗಿವೆ. ಭಯೋತ್ಪಾದನೆ, ಬೆದರಿಕೆಗಳಿಂದ ವಿಶ್ವವನ್ನು ಸುರಕ್ಷಿತಗೊಳಿಸಲು ಎರಡೂ ದೇಶಗಳ ಹಿತಾಸಕ್ತಿ ಒಂದೇ ಆಗಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಲಿವೆ. ಇವೆರಡೂ ಜೊತೆಯಾಗಿ ಸಾಗಿದರೆ, ಒಗ್ಗೂಡಿ ಕೆಲಸ ಮಾಡಿದರೆ, ಜಗತ್ತಿಗೆ ಲಾಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಇದು ನನಗೊಬ್ಬನಿಗೇ ಮಾಡಿರುವ ಸನ್ಮಾನವಲ್ಲ, ಇದು ಭಾರತದ ಇಡೀ ನೂರಾ ಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

d4eaca49-eb08-4b0b-9121-25b6c70af8fb

ಮತ್ತೋರ್ವ ಜಾಗತಿಕ ಉಗ್ರನ ಘೋಷಣೆ :

ಮೋದಿ ಅಮೇರಿಕ ಭೇಟಿ ಹಿನ್ನೆಲೆಯಲ್ಲೇ ಐಎಸ್ ಸೇರಿದ್ದ ಉಗ್ರ ಮೊಹಮ್ಮದ್ ಶಫಿ ಅರ್ಮಾರ್ ನನ್ನು ಅಮೆರಿಕ ಇತ್ತೀಚೆಗಷ್ಟೇ ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿದ್ದ ಬೆನ್ನಲ್ಲಿಯೇ ಮತ್ತೋರ್ವ ಜಾಗತಿಕ ಭಯೋತ್ಪಾದಕನನ್ನು ಘೋಷಿಸಿದೆ. ಈ ಬೆಳವಣಿಗೆಯಿಂದ ಜಾಗತಿಕ ಮಟ್ಟದಲ್ಲಿ ಪಾಕ್ ಗೆ ಭಾರಿ ಮುಖಭಂಗವಾಗಿದೆ.   ಕಾಶ್ಮೀರದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದೀನ್ ನನ್ನು ಅಮೆರಿಕವು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಈ ಮಹತ್ವದ ಘೋಷಣೆ ಹೊರಬಿದ್ದಿದೆ.

2546aef3-8ff0-4ae8-bff6-cbcb8a3cdedd

ಟ್ರಂಪ್ ಗೆ ಆಹ್ವಾನ :

ಪ್ರಧಾನಿ ನರೇಂದ್ರ ಮೋದಿ ಅಮೇರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ತಮಗೆ ಅಮೇರಿಕಾದಲ್ಲಿ ದೊರೆತ ಅದ್ದೊರಿ ಸ್ವಾಗತ ಭಾರತದ 125 ಕೋಟಿ ಜನರಿಗೆ ಸಿಕ್ಕ ಸ್ವಾಗತ ಎಂದು ಬಣ್ಣಿಸಿದ ಮೋದಿ, ಟ್ರಂಪ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

b86048f8-cf82-461f-aa5e-bab95243538e

43562710-fd2c-49e5-96c4-3e6cd771c4fc

518358e3-bc63-41bb-8c20-97be5c14a4ec

2546aef3-8ff0-4ae8-bff6-cbcb8a3cdedd

40d1fb7c-22f7-4693-8b5b-3e4c8d57a5d8

Facebook Comments

Sri Raghav

Admin