ಹುಷಾರ್ : ಸೇಫ್ಟಿ ಲಾಕರ್‍ನಲ್ಲಿಟ್ಟ ವಸ್ತುಗಳು ಕಳುವಾದರೆ ಬ್ಯಾಂಕ್ ಜವಾಬ್ದಾರಿಯಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Safty-Locker

ನವದೆಹಲಿ, ಜೂ.26- ಬ್ಯಾಂಕ್‍ಗಳ ಸೇಫ್ಟಿ ಡಿಪಾಸಿಟ್ ಲಾಕರ್‍ನಲ್ಲಿ ಇಡಲಾಗುವ ಬೆಲೆಬಾಳುವ ವಸ್ತುಗಳು ಕಳುವಾದರೆ ಗ್ರಾಹಕರು ಇನ್ನು ಮುಂದೆ ಬ್ಯಾಂಕ್‍ಗಳನ್ನು ದೂಷಿಸಿ ಪರಿಹಾರ ಕೇಳುವಂತಿಲ್ಲ..!  ಏಕೆಂದರೆ, ಸೇಫ್ಟಿ ಲಾಕರ್‍ನಲ್ಲಿರುವ ವಸ್ತುಗಳು ಕಳುವಾದರೆ ಅಥವಾ ನಾಪತ್ತೆಯಾದರೆ ಅದಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಹೊಣೆಗಾರರಾಗುವುದಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.  ಈ ಕುರಿತ ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಅನ್ವಯ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಆರ್‍ಬಿಐ ಸೇಫ್ಟಿ ಲಾಕರ್‍ನಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡುವಾಗಲೇ ಅದಕ್ಕೆ ಸಂಬಂಧಪಟ್ಟ ನೀತಿ-ನಿಯಮಗಳಿಗೆ ಗ್ರಾಹಕರು ಬದ್ಧರಾಗಿರುತ್ತಾರೆ.

ಲಾಕರ್‍ನಲ್ಲಿನ ವಸ್ತುಗಳು ಕಳುವಾದರೆ ಅಥವಾ ನಾಪತ್ತೆಯಾದರೆ ಅದಕ್ಕೆ ಗ್ರಾಹಕರೇ ಹೊಣೆ ಎಂಬುದನ್ನು ಅರ್ಜಿಯಲ್ಲಿನ ಸೂಚನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಜವಾಬ್ದಾರಿ ಅಥವಾ ಹೊಣೆಗಾರ ಆಗುವುದಿಲ್ಲ ಎಂದು ಆರ್‍ಬಿಐ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin