450 ಅಡಿ ಆಳದ ತೆರೆದ ಬಾವಿಗೆ ಬಿದ್ದು ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Girl--1

ಹೈದರಾಬಾದ್, ಜೂ.26- ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಯರರೆಡ್ಡಿ ಗುಡ್ಡ ಪ್ರದೇಶದಲ್ಲಿ ಗುರುವಾರ ರಾತ್ರಿ ತೆರೆದ ಬಾವಿಗೆ ಬಿದ್ದಿದ್ದ 14 ವರ್ಷದ ಬಾಲಕಿ ಕೊನೆಗೂ ಬದುಕುಳಿಯಲಿಲ್ಲ. ಆಕೆಯ ಮೃತ ದೇಹವನ್ನು ಇಂದು ಬೆಳಗ್ಗೆ ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ.  ರೈತ ಕೂಲಿ ಕಾರ್ಮಿಕರ ಮಗಳಾದ ಚಿನ್ನಾರಿ ಗುರುವಾರ ರಾತ್ರಿ ತನ್ನ ಸಹೋದರಿ ಜತೆ ಆಟವಾಡುವಾಗ ಅಕಸ್ಮಾತ್ ಕಾಲು ಜಾರಿ 450 ಅಡಿ ತೆರೆದ ಬಾವಿಗೆ ಬಿದ್ದಿದ್ದಳು.   ಗುರುವಾರ ರಾತ್ರಿಯಿಂದ ನಡೆದ 58 ಗಂಟೆಗಳ ಕಾರ್ಯಾಚರಣೆ ಫಲ ನೀಡಲಿಲ್ಲ. ಇಂದು ಬೆಳಗ್ಗೆ ಬಾಲಕಿ ಶವ ಪತ್ತೆಯಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin