ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ : ನಾಳೆ ಭಾರತ-ವೆಸ್ಟ್ ಇಂಡೀಸ್ ಮುಖಾಮುಖಿ

ಈ ಸುದ್ದಿಯನ್ನು ಶೇರ್ ಮಾಡಿ

Cricket--v01

ಟೌನ್‍ಟಾನ್,ಜೂ.28-ನಾಳೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಂಗ್ಲರ ವಿರುದ್ಧ 35 ರನ್‍ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ.   ಇಲ್ಲಿನ ಕ್ರೀಡಾಂಗಣದಲ್ಲಿ ನಾಳೆ ಆರಂಭವಾಗಲಿರುವ ಪಂದ್ಯದಲ್ಲಿ ಅತಿಥೇಯ ಆಂಗ್ಲರ ವಿರುದ್ಧ 35 ರನ್‍ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದು, ನಾಳಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‍ನೊಂದಿಗೆ ಸೆಣಸಲಿದೆ.   ಉತ್ತಮ ಲಯದಲ್ಲಿರುವ ಆರಂಭಿಕ ಆಟಗಾರ್ತಿ ಸ್ಮರ್ತಿ ಮಂದನಾ ಅವರು ಮೊದಲ ಪಂದ್ಯದಲ್ಲಿ 90 ರನ್ ಗಳಿಸಿ ಶತಕದಿಂದ ವಂಚಿತರಾದರೂ ಕೂಡ ಅದೇ ಆಟವನ್ನು ನೀಡಲು ತವಕದಲ್ಲಿದ್ದಾರೆ.

ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿರುವ ಭಾರತ ನಾಳಿನ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಲು ಹಪಹಪಿಸುತ್ತಿದೆ. ಪೂನಂ ರಾವತ್, ಮಿಥಿಲಿ ರಾಜ್ ಹಾಗೂ ಬಿರುಸಿನ ಆಟಗಾರ್ತಿ ಹರ್ಮನ್ ಪ್ರೀತ್‍ಕೌರ್ ಅವರು ಯಾವುದೇ ಕ್ಷಣದಲ್ಲಿ ಸಿಡಿದು ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್‍ನಲ್ಲಿ ಆಫ್ ಸ್ಪಿನ್ನರ್ ದೀಪ್ತಿ ಶರ್ಮ, ಮಧ್ಯಮ ವೇಗದ ಬೌಲರ್ ಸಿಕ್ಕಾ ಪಾಂಡೆ ಹಾಗೂ ಲೆಗ್ ಸ್ಪಿನ್ನರ್ ಪೂನಂ ಯಾದವ್ ಇಂಗ್ಲೆಂಡ್ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದು , ನಾಳಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಹಿಂದಿನ ನಾಲ್ಕು ಪಂದ್ಯಗಳ ಫಲಿತಾಂಶದಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾಕ್ಕೆ ಮಣ್ಣು ಮುಕ್ಕಿಸಿರುವ ನಾಯಕಿ ಮಿಥಿಲಿ ರಾಜ್ ನೇತೃತ್ವದ ಭಾರತ ತಂಡ ಹೋರಾಡಲು ಅದೇ ಹುಮ್ಮಸ್ಸಿನಲ್ಲಿದ್ದಾರೆ.

ತಂಡಗಳ ವಿವರ:

ಭಾರತ ತಂಡ:
ಮಿಥಾಲಿ ರಾಜ್- ನಾಯಕಿ, ಹರ್ಮನ್ ಪ್ರೀತ್ ಕೌರ್, ಸ್ಮರ್ತಿ ಮಂದನಾ, ವೇದ ಕೃಷ್ಣಮೂರ್ತಿ, ಮೋನಾ ಮೊಶ್ರಂ, ಪೂನಂ ರಾವತ್, ದೀಪ್ತಿಶರ್ಮ, ಜುಲಾನ ಗೋಸ್ವಾಮಿ, ಸಿಕ್ಕಾ ಪಾಂಡೆ, ಏಕ್ತಾ ಬಿಸ್ತ್ , ಸುಷ್ಮಾ ವರ್ಮ, ಮಾನ್ಸಿ ಜೋಷಿ, ರಾಜೇಶ್ವರಿ ಗಾಯಕ್‍ವಾಡ್, ಪೂನಂ ಯಾದವ್ ಹಾಗೂ ನುಜಾತ್ ಫರ್ವಿನ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin