ಮೋದಿಗೆ ಸೈಕಲ್ ಗಿಫ್ಟ್ ಕೊಟ್ಟ ಡಚ್ ಪ್ರಧಾನಿ…!

ಈ ಸುದ್ದಿಯನ್ನು ಶೇರ್ ಮಾಡಿ

Modi-Cycle

ಹೇಗ್, ಜೂ.28-ನೆದರ್‍ಲೆಂಡ್ಸ್‍ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಚ್ ಸಹವರ್ತಿ ಮಾರ್ಕ್ ರುಟ್ಟೆ ಒಂದು ಬೈಸಿಕಲ್‍ನನ್ನು ಉಡುಗೊರೆ ನೀಡಿ ಚಕಿತಗೊಳಿಸಿದರು. ನೆದರ್‍ಲೆಂಡ್ಸ್ ಪ್ರಧಾನಿ ಪ್ರೀತಿಯಿಂದ ನೀಡಿದ ಬೈಸಿಕಲ್‍ನನ್ನು ಮೋದಿ ಖುಷಿಯಿಂದ ತುಳಿಯುತ್ತಿರುವ ಹಾಗೂ ಅವರ ಪಕ್ಕದಲ್ಲೇ ಮಾರ್ಕ್ ರುಟ್ಟೆ ದೊಡ್ಡದಾಗಿ ನಗುತ್ತಿರುವ ಈ ಚಿತ್ರ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.  ಡಚ್ ಪ್ರಧಾನಿಮಂತ್ರಿ ಮೋದಿ ಅವರಿಗೆ ಸೈಕಲ್‍ನನ್ನೇ ಏಕೆ ಉಡುಗೊರೆಯಾಗಿ ಕೊಟ್ಟರೂ ಎಂಬುದಕ್ಕೆ ಕಾರಣವೂ ಇದೆ. ಆರ್ಥಿಕವಾಗಿ ಸದೃಢಗೊಳ್ಳುತ್ತಿರುವ ನೆದರ್‍ಲೆಂಡ್ಸ್‍ನ ಈ ನಾಯಕ ಅನಗತ್ಯವಾಗಿ ಕಾರನ್ನು ಬಳಸುವುದೇ ಇಲ್ಲ.

ಇನ್ನು ಅವರಿಗೆ ಬೆಂಗಾವಲು ಪಡೆಯಂತೂ ಇಲ್ಲವೇ ಇಲ್ಲ. ಅವರು ತಮ್ಮ ಮನೆಯಿಂದ ಕಚೇರಿಗೆ (ಪ್ರಧಾನಮಂತ್ರಿ ಕಾರ್ಯಾಲಯ) ಸೈಕಲ್‍ನಲ್ಲೇ ಬರುತ್ತಾರೆ. ಕೆಲಸದ ಅವಧಿ ಮುಗಿದ ನಂತರ ಬೈಸಿಕಲ್ ತುಳಿಯುತ್ತಾ ಮನೆಗೆ ಹಿಂದಿರುಗುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಸೈಕಲ್ ಅವರ ಮೆಚ್ಚಿನ ಸಂಗಾತಿ. ಒಮ್ಮೆ ಇರಾನ್‍ನಿಂದ ನಿಯೋಗವೊಂದು ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿತ್ತು. ಆ ನಿಯೋಗವು ಪ್ರಧಾನಿ ಐಷಾರಾಮಿ ಕಾರಿನಲ್ಲಿ ಬೆಂಗಾವಲು ವಾಹನಗಳ ಸಾಲಿನೊಂದಿಗೆ ಬರುತ್ತಾರೆ ಎಂದು ತಿಳಿದಿತ್ತು. ಆದರೆ ಅಚ್ಚರಿ ಎಂಬಂತೆ ಸೂಟುಧಾರಿಯಾದ ಅವರು ತೀರಾ ಕಡಿಮೆ ಬೆಲೆಯ ಸೈಕಲ್ ತುಳಿಯುತ್ತಾ ಬಂದು ಪಾಕಿಂಗ್‍ನಲ್ಲಿ ನಿಲ್ಲಿಸಿ ನಿಯೋಗದತ್ತ ಕೈ ಬೀಸಿ ನಡೆದು ಬಂದಾಗ ಅಲ್ಲಿದ್ದವರು ಚಕಿತರಾದರು.
ಪ್ರಧಾನಿ ಮೋದಿ ಅವರ ಕಾರ್ಯ ವೈಖರಿ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವ ಹೊಂದಿರುವ ಮಾರ್ಕ್ ತಮ್ಮ ಅಚ್ಚುಮೆಚ್ಚಿನ ವಾಹನವನ್ನು ಪ್ರೀತಿಯ ಸಂಕೇತವಾಗಿ ನೀಡಿ ಸಂತುಷ್ಟಗೊಳಿಸಿದ್ಧಾರೆ. ಮೋದಿ ಈ ಉಡುಗೊರೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ ಡಚ್ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin