ಈ ವಾರ ತೆರೆ ಮೇಲೆ ಬರುತ್ತಿದೆ ಸಸ್ಪೆನ್ಸ್ ಕಥಾಹಂದರ ‘ಆಕೆ’

ಈ ಸುದ್ದಿಯನ್ನು ಶೇರ್ ಮಾಡಿ

aake--01

ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವಂತಹ ಚಿತ್ರಗಳೇ ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಈಗ ಆಕೆ ಎಂಬ ಮತ್ತೊಂದು ಸಸ್ಪೆನ್ಸ್ ಕಥಾಹಂದರ ಒಳಗೊಂಡಿರುವಂತಹ ಚಿತ್ರ ತೆರೆ ಮೇಲೆ ತನ್ನ ಚಮತ್ಕಾರ ತೋರಿಸಲು ಸಿದ್ಧವಾಗಿ ನಿಂತಿದೆ. ಆ ದಿನಗಳು, ಆಟಗಾರರಂತಹ ವಿಭಿನ್ನ ನಿರೂಪಣೆಯ ಚಿತ್ರಗಳನ್ನು ನಿರ್ದೇಶಿಸಿದ ಕೆ.ಎಂ.ಚೈತನ್ಯ ಮೊದಲ ಬಾರಿಗೆ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಕಾರದೊಂದಿಗೆ ಸುನಂದಾ ಮುರಳಿ ಮೋಹನ್, ಸೂರಿ ಹಾಗೂ ಕಲೈ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಈ ಚಿತ್ರಕ್ಕೆ ಯೋಗೀಶ್ ದ್ವಾರಕೀಶ್ ಕಾರ್ಯಕಾರಿ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರದ ಬಹುತೇಕ ಭಾಗ ಲಂಡನ್‍ನಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ. ಹಾಲಿವುಡ್‍ನ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ.  ಲಂಡನ್‍ನಲ್ಲಿ ವಾಸವಾಗಿರುವ ಚಿತ್ರಕಲಾವಿದ ಶಿವ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಗಂಡನಿಂದ ಬೇರೆಯಾಗಿ ತನ್ನ ಮಗುವನ್ನು ಸಾಕುತ್ತಾ ಸಿನಿಮಾ ನಟಿ ಆಗಬೇಕೆಂಬ ಕನಸನ್ನು ಹೊತ್ತ ಶರ್ಮಿಳಾ ಇಬ್ಬರ ಕಥೆಯನ್ನು ಹೇಳುವ ಚಿತ್ರ ಆಕೆ.

ಈ ಚಿತ್ರದ ಪ್ರತಿಯೊಂದು ದೃಶ್ಯವೂ ತಾಂತ್ರಿಕ ದೃಷ್ಠಿಯಿಂದಲೂ ವಿಭಿನ್ನವಾಗಿ ಮೂಡಿಬಂದಿದ್ದು, ಈಗಾಗಲೇ ಚಿತ್ರದ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಅದೇ ರೀತಿ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಈ ಚಿತ್ರದ ಟ್ರೈಲರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.  ಬ್ರಿಟನ್‍ನ 450 ವರ್ಷಗಳ ಹಿಂದಿನ ಪ್ಯಾಲೇಸ್‍ನಲ್ಲಿ ಚಿತ್ರೀಕರಣ ಮಾಡಿದ್ದು, ಈ ಚಿತ್ರ ಬಹುತೇಕ ರಾತ್ರಿಯಲ್ಲೇ ಹೆಚ್ಚು ಚಿತ್ರೀಕರಣ ನಡೆಸಿದ್ದಾರೆ. ಇಡೀ ಚಿತ್ರತಂಡ ಒಂದು ವಿಭಿನ್ನ ಪ್ರಯತ್ನ ಮಾಡಿ ಕನ್ನಡ ಸಿನಿ ಪ್ರಿಯರಿಗೆ ಒಂದು ಸ್ಪೆಷಲ್ ಚಿತ್ರವನ್ನು ನೀಡುವ ತವಕ ಹೊಂದಿದ್ದು, ಅದೇ ರೀತಿ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರಂತೆ. ಈ ಚಿತ್ರ ಸ್ಯಾಂಡಲ್‍ವುಡ್‍ನ ಪ್ರತಿಯೊಬ್ಬ ಸಿನಿಪ್ರಿಯರು ಇಷ್ಟ ಪಡಲಿದ್ದಾರೆ ಎಂಬ ನಂಬಿಕೆಯೊಂದಿಗೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin