ಉಡುಪಿ ಮಠದಲ್ಲಿ ನಮಾಜ್, ಇಫ್ತಾರ್ ಕೂಟ ವಿರೋಧಿಸಿ ಜು. 2ರಂದು ರಾಜ್ಯದಾದ್ಯಂತ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Pramod-Mutalik

ಹುಬ್ಬಳ್ಳಿ,ಜೂ.29- ಹಿಂದೂಗಳ ಪ್ರವಿತ್ರ ಕ್ಷೇತ್ರ ಉಡುಪಿ ಶ್ರೀಕೃಷ್ಣ ಮಠದ ಪವಿತ್ರತೆ ಕಾಪಾಡುವದು ನಮ್ಮ ಕರ್ತವ್ಯ. ಹಾಗಾಗಿ ನಾವು ಮಠದಲ್ಲಿ ನಡೆದ ಅನಿಷ್ಟ ಪದ್ದತಿ ವಿರೋಧಿಸಿ ಜುಲೈ 2ರಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಘಟಕಗಳಿಂದ ಪ್ರತಿಭಟನೆ ಹಮ್ಮಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಶ್ರೀಗಳು ಮಧ್ವಾಚಾರ್ಯರ ಬಗ್ಗೆ ಹೇಳುತ್ತಾರೆ, ಅವರು ಪವಾಡ ಪುರಷರು. ಅವರು ಎಂದು ಮುಸ್ಲಿಂರನ್ನ ಮಠದಲ್ಲಿ ನಮಾಜ್ ಹಾಗೂ ಇಫ್ತಾರ್ ಮಾಡಿ ಎಂದು ಹೇಳಿಲ್ಲ ಎಂದರು.

ಮುಸ್ಲಿಂರು ಮಠಕ್ಕೆ ಭೂಮಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಆದರೆ ಮುಸ್ಲಿಂರು ಆಕ್ರಮಣ ಮಾಡುವರು. ಆಯೋಧ್ಯ ಭೂಮಿಯಲ್ಲಿ ಕೇವಲ ರಾಮ ಮಂದಿರ ಅಂತ ಹೇಳಿದ್ದಿರಿ. ಬಾಬರ್ ಮಸೀದಿ ಮಾಡಲು ಬಿಡುವದಿಲ್ಲ ಎಂದು ಹೇಳಿದ್ದಿರಿ. ಅವತ್ಯಾಕೆ ಸೌಹಾರ್ದ ನಿಮ್ಮಲ್ಲಿ ಬರಲಿಲ್ಲ. ಈಗ್ಯಾಕೆ ನಿಮಗೆ ಸೌಹಾರ್ದ ನೆನಪಾಯಿತು ಎಂದು ಪೇಜಾವರ ಶ್ರೀಗಳನ್ನು ಅವರು ಪ್ರಶ್ನಿಸಿದರು.  ಕೇವಲ ನಾವಷ್ಟೆ ಸೌಹಾರ್ದ ಮಾಡುತ್ತ್ತೇವೆ. ಮುಸ್ಲಿಂ ಸೌಹಾರ್ದದ ಬಗ್ಗೆ ಮಾತನಾಡಲ್ಲ ಏಕೆ ಎಂದು ಕೇಳಿದ ಅವರು ಪೇಜಾವರ ಸ್ವಾಮಿಗಳ ಹಿಂದೂಗಳು ಕೂಡಾ ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ಶ್ರೀಗಳು ಇಂತಹ ಹೇಳಿಕೆ ಕೊಟ್ಟು ಹಿಂದೂಗಳನ್ನ ಅವಮಾನ ಮಾಡಿದ್ದಾರೆ. ಹೀಗಾಗಿ ಸ್ವಾಮೀಜಿಯವರು ಅವರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin