ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident

ಬೆಳಗಾವಿ ಜೂ.30 : ನಗರದ ಹೊರವಲಯದಲ್ಲಿರುವ ಕಾಕತಿ ಗ್ರಾಮದ ಒಂಟಮೂರಿಯಲ್ಲಿ ಇನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ‌ ಹೋಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಐವರು ಸಾವನಪ್ಪಿ ಮೂವರಿಗೆ ಗಂಭೀರಗಾಯವಾದ ಘಟನೆ ಗುರುವಾರ ರಾತ್ರಿ ನಡೆದಿದೆ‌. ಬೆಳಗಾವಿ ತಾಲೂಕಿನ ಒಂಟಮೂರಿ ಘಾಟ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ‌ ಬಳಿ ದುರ್ಘಟನೆ ಸಂಭವಿಸಿದ್ದು10:40 ರ ಸುಮಾರಿಗೆ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.

ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ತೆರಳುವ ಸಂದರ್ಭದಲ್ಲಿ ಓರ್ವ ಮೃತಪಟ್ಟಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗಾವಿಯಿಂದ ಚಿಕ್ಕೋಡಿಗೆ ಹೋರಟ ಕಾರು ಡಿವೈಡರಗೆ ಅಪ್ಪಳಿಸಿದೆ. ಇವರು ಮೂಲತಃ ಚಿಕ್ಕೋಡಿ ಯವರು ಎಂದು‌ ಗುರುತಿಸಲಾಗಿದೆ. ಸ್ಥಳಕ್ಕೆ ಡಿಸಿಪಿ‌ ಅಮರನಾಥ ರೆಡ್ಡಿ ‌ಭೇಟಿ‌ ನೀಡಿ‌ ಪರಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin