ಮದುವೆಯ ಮುನ್ನಾದಿನವೇ ಜ್ವರದಿಂದ ಬಳಲಿ ಸಿಎಆರ್ ಕಾನ್‍ಸ್ಟೆಬಲ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

CAR-Police

ಹೊಸಪೇಟೆ, ಜೂ.30-ರಜೆ ಮೇಲೆ ಬಂದಿದ್ದ ಸಿಎಆರ್ ಪೊಲೀಸ್ ಕಾನ್‍ಸ್ಟೆಬಲ್ ಒಬ್ಬರು ತೀವ್ರ ಜ್ವರದಿಂದ ಬಳಲಿ ಸಾವನ್ನಪ್ಪಿರುವ ಘಟನೆ ಹೂವಿನಹಡಗಲಿ ತಾಲೂಕಿನ ಬಸರಳ್ಳಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ಕೊರ್ಲಗಟ್ಟಿ(30)ಸಾವಿಗೀಡಾದ ಕಾನ್‍ಸ್ಟೆಬಲ್. ದುರಂತವೆಂದರೆ ಇವರ ವಿವಾಹ ನಾಳೆ ನಿಶ್ಚಯವಾಗಿತ್ತು. ಜ್ವರದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಬಸರಳ್ಳಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin