ಮುಸ್ಲಿಂ ರಾಷ್ಟ್ರಗಳ ಪ್ರವಾಸ ನಿಷೇಧಿಸಿದ್ದ ಟ್ರಂಪ್ ನಿರ್ಧಾರ ಫಲ ನೀಡುತ್ತಿದೆ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಜೂ.30-ಭಯೋತ್ಪಾದಕತೆಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಆರು ಮುಸ್ಲಿಮ್ ರಾಷ್ಟ್ರಗಳ ಮೇಲಿನ ಪ್ರವಾಸ ನಿಷೇಧ ಇದೀಗ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ.   ಹಲವು ದೇಶಗಳು ಮತ್ತು ಸ್ಥಳೀಯ ಪ್ರಜಾಪ್ರಭುತ್ವವಾದಿಗಳ ವಿರೋಧದ ನಡುವೆಯೂ ಡೊನಾಲ್ಡ್ ಟ್ರಂಪ್ ಅವರು ಇರಾನ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯ ಮತ್ತು ಯೆಮೆನ್‍ಗಳ ವಿರುದ್ದ 90 ದಿನಗಳ ಪ್ರವಾಸ ನಿಷೇಧ ಹೇರಿದ್ದರು ಮತ್ತು ನಿರಾಶ್ರಿತರ ದೇಶ ಪ್ರವಾಸಕ್ಕೆ 120 ದಿನಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿದ್ದಲ್ಲದೆ ಅಮೆರಿಕದಲ್ಲಿ ವಾಸವಾಗಿರುವ ವಿದೇಶಿ ಪ್ರಜೆಗಳ ದೂರದ ಸಂಬಂಧಿಗಳು(ಅಜ್ಜ , ಅಜ್ಜಿ , ಅಂಕಲ್, ಆ್ಯಂಟಿ, ಮೊಮ್ಮಕ್ಕಳು, ದತ್ತು ಮಕ್ಕಳು ಇತ್ಯಾದಿ)ಅಮೆರಿಕದೊಳಗೆ ಪ್ರವೇಶಿಸುವ ಬಗ್ಗೆಯೂ ಅವರು ತಡೆಯೊಡ್ಡಿದ್ದರು.  ಆದರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin