ವೇತನ ಸಿಗದೇ ಮನನೊಂದ ಜವಾನ ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Suicide-Office

ಬಾಗಲಕೋಟೆ, ಜೂ.30- ಗ್ರಾಚ್ಯುಯಿಟಿ, ಅರಿಯರ್ಸ್ ವೇತನ ನೀಡದೆ ಇರುವುದರಿಂದ ಮನನೊಂದ ಅರಣ್ಯ ಇಲಾಖೆ ನಿವೃತ್ತ ಜವಾನ ಡೆತ್‍ನೋಟ್ ಬರೆದಿಟ್ಟು ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಯ್ಯಪ್ಪನಾಯ್ಕರ್ (63) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಜವಾನ. ಗ್ರ್ಯಾಚುಯಿಟಿ ಮತ್ತು ಅರಿಯರ್ಸ್ ವೇತನ ಬರದೆ ಇದ್ದು, ನಾನು ಮಾಡಿದ್ದ 1 ಲಕ್ಷ ಸಾಲವನ್ನು ಮರುಪಾವತಿಸಲು ಆಗದೆ ಮನೆ ಬಳಿ ಸಾಲಗಾರರು ಬಂದು ಗಲಾಟೆ ಮಾಡುತ್ತಿದ್ದಾರೆ.

ವೇತನದ ಹಣ ಬಂದರೆ ಆ ಸಾಲವನ್ನು ತೀರಿಸಬಹುದು ಎಂದುಕೊಂಡಿದ್ದೆ. ಆದರೆ, ಅಧಿಕಾರಿಗಳು ನನಗೆ ಹಣ ನೀಡುತ್ತಿಲ್ಲ. ಇದರಿಂದ ಸಾಲ ಕೂಡ ತೀರಿಸಲು ಆಗದೆ ಮನನೊಂದಿದ್ದೇನೆ.  ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಯ್ಯಪ್ಪ ನಾಯ್ಕರ್ ಡೆತ್‍ನೋಟ್ ಬರೆದಿಟ್ಟು ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin