ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಮತ್ತೊಬ್ಬ ಯಾತ್ರಿ ಹೃದಯಾಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Amaranath-temple
ಶ್ರೀನಗರ, ಜು.1-ಅಮರನಾಥ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ಪಶ್ಚಿಮ ಬಂಗಾಳದ ಯಾತ್ರಿಯೊಬ್ಬರು ಇಂದು ಮುಂಜಾನೆ ದಕ್ಷಿಣ ಕಾಶ್ಮೀರದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತಪಟ್ಟ ಯಾತಾರ್ಥಿಗಳ ಸಂಖ್ಯೆ ಮೂರಕ್ಕೇರಿದೆ.  ಹೌರಾ ನಿವಾಸಿ 72 ವರ್ಷದ ಎ.ಕೆ.ಮುಖರ್ಜಿ ಹೃದಯ ಸ್ತಂಭನದಿಂದ ಇಂದು ಮುಂಜಾನೆ ಪೊಶ್‍ಪತ್ರಿಯಲ್ಲಿ ನಿಧನರಾದರು ಎಂದು  ಪೊಲೀಸರು ತಿಳಿಸಿದ್ದಾರೆ.  ಈ ವರ್ಷದ ಯಾತ್ರೆಯಲ್ಲಿ ಈವರೆಗೆ ಮೂವರು ಯಾತ್ರಿಗಳು ಮೃತಪಟ್ಟಿದ್ದಾರೆ. ಜೂನ್ 29ರಂದು ಬ್ರಾರಿಮಾರ್ಗ್‍ನಲ್ಲಿ ಕಲ್ಲು ಬಡಿದು ಜಮ್ಮುವಿನ ಅಮರನಾಥ ಭಕ್ತರೊಬ್ಬರು ಅಸುನೀಗಿದ್ದರು. ಅದಕ್ಕೂ ಒಂದು ದಿನ ಮುಂಚೆ ಅದೇ ಸ್ಥಳದಲ್ಲಿ ಐಟಿಬಿಪಿ ಸಬ್‍ಇನ್ಸ್‍ಪೆಕ್ಟರ್ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin