ಜಿಎಸ್‍ಟಿ ಎಫೆಕ್ಟ್ : ದುಬಾರಿಯಾಯ್ತು ಕಾಫಿ-ತಿಂಡಿ, ಇಳಿಕೆಯಾಯ್ತು ಪೆಟ್ರೋಲ್-ಡಿಸೆಲ್

ಈ ಸುದ್ದಿಯನ್ನು ಶೇರ್ ಮಾಡಿ

Coffie--01

ಬೆಂಗಳೂರು,ಜು.1- ಮಧ್ಯರಾತ್ರಿಯಿಂದಲೇ ಜಿಎಸ್‍ಟಿ ಜಾರಿಯಾದ ಕೂಡಲೇ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42 ರೂ. ಮತ್ತು ಡೀಸೆಲ್ ದರ 3.57 ರೂ. ಕಡಿತವಾಗಿದೆ. ನಿನ್ನೆ ಬೆಂಗಳೂರಿನಲ್ಲಿ 57.80 ರೂ. ಇದ್ದ ಡೀಸೆಲ್ ದರ ಇಂದು ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರೂ.ಗೆ ಇಳಿಕೆಯಾಗಿದೆ. ಅಂತೆಯೇ ನಿನ್ನೆ 67.66 ರೂ. ಇದ್ದ ಪೆಟ್ರೋಲ್ ದರ 64.24 ರೂ.ಗೆ ಇಳಿಕೆಯಾಗಿದೆ. ಅಂದರೆ ಡೀಸೆಲ್‍ನಲ್ಲಿ 3.57 ರೂ. ಕಡಿತವಾಗಿದ್ದರೆ, ಪೆಟ್ರೋಲ್‍ನಲ್ಲಿ 3.42 ರೂ.ನಷ್ಟು ಇಳಿಕೆಯಾಗಿದೆ.  ಇದುವರೆಗೆ ಇದ್ದ ಬೇರೆ ಎಲ್ಲ ರೀತಿಯ ತೆರಿಗೆಗಳು ಹೋಗಿ, ಜಿಎಸ್ಟಿಯೊಂದೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡರಲ್ಲೂ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆ :

ಇತ್ತ ಈ ಹಿಂದೆ ರೈತರ ಸಾಲಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ತನ್ನ ಮೇಲಿನ ಸುಮಾರು 8300 ಕೋಟಿ ರೂ. ಹೊರೆಯನ್ನು ಇಳಿಕೆ ಮಾಡಿಕೊಳ್ಳಲು ತನ್ನ ಪಾಲಿನ ತೈಲೋತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಅದರಂತೆ ಮುಂದಿನ 4 ತಿಂಗಳಲ್ಲಿ 4 ಸಾವಿರ ಕೋಟಿ ಸಂಗ್ರಹ ಮಾಡುವ ಉದ್ದೇಶದಿಂದ ಹಾಲಿ ಇರುವ ತೈಲೋತ್ಪನ್ನಗಳ ಮೇಲಿನ ತನ್ನ ಪಾಲಿನ ತೆರಿಗೆ ಪ್ರಮಾಣವನ್ನು ಮತ್ತು ಅಬಕಾರಿ ಸುಂಕವನ್ನು ಶೇ.2ಕ್ಕೆ ಏರಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.

ಕಾಫಿ, ತಿಂಡಿಗಳಲ್ಲಿ ಬೆಲೆ ಏರಿಕೆ:

ಜಿಎಸ್‍ಟಿ ಜಾರಿಗೊಂಡ ಹಿನ್ನೆಲೆಯಲ್ಲಿ ಟೀ, ಕಾಫಿ ಸೇರಿದಂತೆ ತಿಂಡಿ ತಿನಿಸುಗಳ ದರವೂ ಏರಿಕೆಯಾಗಿದೆ. ಜಿಎಸ್‍ಟಿ ಜಾರಿಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮಧ್ಯ ರಾತ್ರಿಯಿಂದಲೇ ಊಟ, ತಿಂಡಿ, ತಿನಿಸು ಹಾಗೂ ಟೀ ಕಾಫಿಯ ಬೆಲೆಯಲ್ಲಿ 5 ರೂ.ವರೆಗೆ ಹೆಚ್ಚಳವಾಗಿದೆ.  ಬೆಣ್ಣೆ ಮೇಲೆ ಶೇ.6ರಿಂದ ಶೇ.12ರಷ್ಟು ಹೆಚ್ಚಳವಾಗಿದೆ. ಎಸಿ, ಫೈವ್ ಸ್ಟಾರ್  ಹೋಟೆಲ್ ಗಳ ಶೇ.6ರಷ್ಟಿದ್ದ ತೆರಿಗೆಯನ್ನು ಶೇ.12ಕ್ಕೆ ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ ಎಂಬುದು ಹೋಟೆಲ್ ಮಾಲೀಕರ ವಾದವಾಗಿದೆ. ಪ್ರತಿಯೊಂದು ಫುಡ್ ಐಟಂಗಳ ಮೇಲಿನ ಬೆಲೆಯನ್ನು 5 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ ಎಂದು ಹೋಟೆಲ್  ಮಾಲೀಕರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin