ಜಿಎಸ್‍ಟಿ ಎಫೆಕ್ಟ್ : ಮಾರುತಿ ಕಾರುಗಳ ಖರೀದಿಗಾರರಿಗೆ ಸಿಹಿ ಸುದ್ದಿ ..!

ಈ ಸುದ್ದಿಯನ್ನು ಶೇರ್ ಮಾಡಿ

maruthi
ನವದೆಹಲಿ, ಜು.1-ದೇಶಾದ್ಯಂತ ಮಧ್ಯರಾತ್ರಿಯಿಂದ ಜಾರಿಗೆ ಬಂದಿರುವ ಜಿಎಸ್‍ಟಿ ಪ್ರಯೋಜನ ತನ್ನ ಗ್ರಾಹಕರಿಗೆ ಲಭಿಸುವಂತಾಗಲು ಭಾರತದ ಅಗ್ರಮಾನ್ಯ ಆಟೋಮೊಬೈಲ್ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಇಂದಿನಿಂದಲೇ ಜಾರಿಗೆ ಬರುವಂತೆ ತನ್ನ ಕಾರುಗಳ ಬೆಲೆಯನ್ನು ಶೇ.3ರಷ್ಟು ಇಳಿಸಿದೆ.  ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಕಂಪನಿಯು ಜಿಎಸ್‍ಟಿ ಫಲಾನುಭವವು ದೇಶದ ತನ್ನ ಎಲ್ಲ ಗ್ರಾಹಕರಿಗೆ ಲಭಿಸುವಂತಾಗಲು ಇಂದಿನಿಂದಲೇ ಎಲ್ಲ ಮಾದರಿ ಕಾರುಗಳ ಬೆಲೆಯಲ್ಲಿ ಶೇ.3ರಷ್ಟು ಕಡಿತ ಮಾಡಿರುವುದಾಗಿ ಘೋಷಿಸಿದೆ.  ಮಾರುತಿ ಸುಜುಕಿ ಮಾಡೆಲ್‍ಗಳ ಎಕ್ಸ್-ಶೋರೂಂ ದರಗಳು ಶೇ.3ರಷ್ಟು ಕಡಿಮೆಯಾಗಲಿವೆ. ಜಿಎಸ್‍ಟಿ ಜಾರಿಗೆ ಮುನ್ನ ಅನ್ವಯವಾಗುವ ವ್ಯಾಟ್ ದರದ ಆಧಾರದ ಮೇಲೆ ದೇಶದ ವಿವಿಧ ಸ್ಥಳಗಳಲ್ಲಿ ಇಳಿಕೆ ದರವು ಜಾರಿಗೆ ಬರಲಿದೆ ಎಂದು ಎಂಎಸ್‍ಐ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin