ಬಿಎಂಟಿಸಿ ಬಸ್‍ನಲ್ಲಿ ಪರ್ಸ್ ಕದ್ದು ಎಟಿಎಂ ಕಾರ್ಡ್ ನಿಂದ 1.66 ರೂ ಎಗರಿಸಿದ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

BMTC-01

ಬೆಂಗಳೂರು, ಜು.1- ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್‍ಕದ್ದ ಚೋರ ಅದರಲ್ಲಿದ್ದ ಎಟಿಎಂ ಕಾರ್ಡ್‍ಗಳಿಂದ 1.66 ಲಕ್ಷ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ.  ಕೋಕನಟ್ ಗಾರ್ಡನ್ ನಿವಾಸಿ ಜಾನಕಿ ಎಂಬುವರು ನಿನ್ನೆ ಮಧ್ಯಾಹ್ನ ಮಲ್ಲೇಶ್ವರಂ ಸರ್ಕಲ್‍ನಿಂದ ಬಿಎಂಟಿಸಿ ಬಸ್ ಹತ್ತಿ ಮಧುವನ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಲು ಮತ್ತೊಂದು ಬಸ್ ಹತ್ತಿ ಕೋಕನಟ್ ಗಾರ್ಡನ್‍ನಲ್ಲಿ ಇಳಿದು ಮನೆಗೆ ತೆರಳುತ್ತಿದ್ದಾಗ ಇವರ ಮೊಬೈಲ್‍ಗೆ 1.66 ಲಕ್ಷ ರೂ. ಡ್ರಾ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ಈ ವೇಳೆ ಬ್ಯಾಗ್ ನೋಡಿಕೊಂಡಾಗ ಬ್ಯಾಗ್‍ನ ಜಿಪ್ ತೆರೆದುಕೊಂಡಿದ್ದು, ಅದರಲ್ಲಿದ್ದ ಪರ್ಸ್ ಕಳ್ಳತನವಾಗಿರುವುದು ಗೊತ್ತಾಗಿದೆ.

ತಕ್ಷಣ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ಪರ್ಸ್ ಕಳುವಾಗಿರುವ ಬಗ್ಗೆ ದೂರು ನೀಡಿದ್ದು, ಪರ್ಸ್‍ನಲ್ಲಿ 3 ಎಟಿಎಂ ಕಾರ್ಡ್‍ಗಳು, 4000 ಹಣ ಇತ್ತೆಂದು ತಿಳಿಸಿದ್ದಾರೆ.  ಪರ್ಸ್ ಕದ್ದವರು ಎಟಿಎಂಗಳಿಂದ ಹಣ ಡ್ರಾ ಮಾಡಿಕೊಂಡಿದ್ದಲ್ಲದೆ ಈ ಕಾರ್ಡ್‍ಗಳನ್ನು ಬಳಸಿ ವಿವಿಧ ವಸ್ತುಗಳನ್ನು ಖರೀದಿಸಿದ್ದು, ಒಟ್ಟಾರೆ ಜಾನಕಿಯವರ ಅಕೌಂಟ್‍ನಿಂದ 1.66 ಲಕ್ಷ ರೂ. ಗುಳುಂ ಆಗಿದೆ. ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin