ಅಮೆರಿಕದ ಅರ್ಕಾನ್ಸಸ್‍ನ ನೈಟ್‍ಕ್ಲಬ್‍ನಲ್ಲಿ ಗುಂಡಿನ ದಾಳಿ, ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

night-club
ಲಿಟಲ್‍ರಾಕ್, ಜು.2-ಅಮೆರಿಕದ ಅರ್ಕಾನ್ಸಸ್‍ನ ಲಿಟಲ್‍ರಾಕ್‍ನಲ್ಲಿರುವ ನೈಟ್‍ಕ್ಲಬ್ ಒಂದರಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ನೈಟ್‍ಕ್ಲಬ್‍ನಲ್ಲಿದ್ದ ಜನರ ನಡುವೆ ಗಲಭೆಯಾದ ಬಳಿಕ ಈ ಗುಂಡಿನ ದಾಳಿ ನಡೆದಿದೆ ಎಂದು ಲಿಟಲ್‍ರಾಕ್ ಪೊಲೀಸ್ ಮುಖ್ಯಸ್ಥ ಕೆಂಟನ್ ಬಕ್ನರ್ ತಿಳಿಸಿದ್ದಾರೆ.  ಗಾಯಗೊಂಡ 20 ಮಂದಿಯಲ್ಲಿ 17 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಭಯೋತ್ಪಾದಕರ ದಾಳಿ ಎಂದು ನಾವು ಪರಿಗಣಿಸಿಲ್ಲ ಎಂದು ಪೊಲೀಸ್ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin