ಇನ್ನೂ ಎರಡು ತಿಂಗಳ ಕಾಲ ಜಿಟಿಎಸ್-ಪೂರ್ವ ದರದಲ್ಲೇ ಔಷಧಿಗಳ ಖರೀದಿಸಲು ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

medical
ನವದೆಹಲಿ, ಜು.2-ಏಕ ರೂಪದ ತೆರಿಗೆ ವ್ಯವಸ್ಥೆ ಜಿಎಸ್‍ಟಿ ನಿನ್ನೆಯಿಂದ ದೇಶಾದ್ಯಂತ ಜಾರಿಗೆ ಬಂದಿದ್ದರೂ, ರೋಗಿಗಳಿಗೆ ಅನುಕೂಲವಾಗುವಂತೆ ಉತ್ತಮ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಅನಾರೋಗ್ಯ ಪೀಡಿತರು ಮತ್ತು ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಎರಡು ತಿಂಗಳ ಕಾಲ ಜಿಟಿಎಸ್-ಪೂರ್ವ ದರದಲ್ಲೇ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಔಷಧಗಳ ಪರಿಷ್ಕೃತ ದರಗಳ ಬದಲಿಗೆ ಮೆಡಿಕಲ್ ಸ್ಟೋರ್‍ಗಳಲ್ಲಿ ಈಗಾಗಲೆ ಇರುವ ಆರ್‍ಎಂಪಿ(ಗರಿಷ್ಠ ಮಾರಾಟ ಬೆಲೆ) ದರದಲ್ಲೇ ಖರೀದಿಸಬಹುದಾಗಿದೆ.ಹೊಸ ಬ್ಯಾಚ್ ನಂಬರಿನ ಔಷಧಿಗಳು ಬರುವವರೆಗೆ ಹಳೇ ದರದಲ್ಲೇ ಮಾರಾಟ ಮಾಡುವಂತೆ ಔಷಧಿ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ. ಹಳೆಯ ಔಷಧಿಗಳು ಮುಗಿಯುವವರೆಗೆ ಅಂದರೆ ಸುಮಾರು ಎರಡು ತಿಂಗಳ ಕಾಲ ಆರ್‍ಎಂಪಿ ದರದಲ್ಲೇ ಮಾರಾಟ ಮಾಡಲು ಅವಕಾಶ ಇರುತ್ತದೆ. ಹೊಸ ದರ ನಮೂದಿಸಿದ ಔಷಧಿಗಳು ಆಗಸ್ಟ್ ವೇಳೆಗೆ ಮಾರುಕಟ್ಟೆ ತಲುಪುವ ನಿರೀಕ್ಷೆ ಇದೆ.  ಡಯಾಬಿಟಿಸ್ ರೋಗಿಗಳು ಬಳಸುವ ಇನ್ಸುಲಿನ್, ಮೂತ್ರಪಿಂಡ ಮತ್ತು ಕ್ಯಾನ್ಸರ್ ಚಿಕಿತ್ಸೆ ಔಷಧಿಗಳು, ತುರ್ತು ಚಿಕಿತ್ಸಾ ಘಟಕದ ಔಷಧಿಗಳು, ವೈರಾಣು ನಿರೋಧಕ ಮತ್ತು ಜೀವರಕ್ಷಕ ಉತ್ಪನ್ನಗಳ ಬೆಲೆ ಜಿಎಸ್‍ಟಿ ಜಾರಿ ನಂತರ ಕಡಿಮೆಯಾಗಲಿದೆ.  ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ ಔಷಧಿಗಳಿಗೆ ಶೇ.12ರಷ್ಟು ಹಾಗೂ ಇನ್ಸುಲಿನ್ ಮತ್ತಿತರ ತುರ್ತು ಅಗತ್ಯದ ಉತ್ಪನ್ನಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin