ಉತ್ತರಪ್ರದೇಶ : ಗ್ಯಾಂಗ್‍ರೇಪ್ ಸಂತ್ರಸ್ತೆ ಮೇಲೆ 5ನೇ ಬಾರಿ ಆ್ಯಸಿಡ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Acid-attack
ಲಕ್ನೋ, ಜು.2-ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳ ಮೇಲೆ ದುಷ್ಕರ್ಮಿಗಳಿಂದ ಮತ್ತೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಉತ್ತರಪ್ರದೇಶದ ಲಕ್ನೋದ ಅಲಿಗಂಜ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಸಂತ್ರಸ್ತ ಮಹಿಳೆ ಆ್ಯಸಿಡ್ ದಾಳಿಗೆ ಒಳಗಾಗಿರುವುದು ಇದು ಐದನೇ ಬಾರಿ.
ಆಕೆ ನೆಲೆಸಿರುವ ಹಾಸ್ಟೆಲ್ ಬಳಿ ಈ ಘಟನೆ ನಡೆದಿದೆ. ಆ್ಯಸಿಡ್ ದಾಳಿಯಿಂದಾಗಿ ಮಹಿಳೆಯ ಮುಖ ಮತ್ತು ಕತ್ತಿಗೆ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.


ಈವರೆಗೆ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಮತ್ತು ಮಹಿಳೆ ದೂರು ನೀಡುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಾರ್ಚ್ 23ರಂದು ಇದೇ ಮಹಿಳೆ ಮೇಲೆ ಲಕ್ನೋ ಬಳಿ ರೈಲಿನಲ್ಲಿ ಆಕ್ರಮಣ ಮಾಡಿದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಕುಡಿಯುವಂತೆ ಮಾಡಿದ್ದರು. ಆಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ 1 ಲಕ್ಷ ರೂಗಳ ನೆರವು ಪರಿಹಾರ ಘೋಷಿಸಿದ್ದರು. ಇದೇ ಮಹಿಳೆ ಮೇಲೆ 2009ರಂದು ಉಂಚಾಹಾರ್‍ನಲ್ಲಿನ ತನ್ನ ಮನೆಯಲ್ಲಿ ಆಸ್ತಿ ವಿವಾದದ ಸಂಬಂಧ ಇಬ್ಬರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆ್ಯಸಿಡ್ ದಾಳಿ ನಡೆಸಿದ್ದರು. 2012ರಲ್ಲಿ ಈಕೆಯ ಮೇಲೆ ಚಾಕುವಿನಿಂದ ಆಕ್ರಮಣ ನಡೆದಿತ್ತು. 2013ರಲ್ಲೂ ಆ್ಯಸಿಡ್ ಎರಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin