ಗ್ಯಾಂಗ್‍ವಾರ್‍ನಲ್ಲಿ ತೊಡಗಿದ್ದ 19 ಬಂದೂಕುದಾರಿಗಳನ್ನು ಹತ್ಯೆ ಮಾಡಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Mexico
ಮೆಕ್ಸಿಕೊ ಸಿಟಿ, ಜು.2-ಗ್ಯಾಂಗ್‍ವಾರ್‍ನಲ್ಲಿ ತೊಡಗಿದ್ದ 19 ಬಂದೂಕುದಾರಿಗಳನ್ನು ಹತ್ಯೆ ಮಾಡಿರುವುದಾಗಿ ಮೆಕ್ಸಿಕೋ ಪೊಲೀಸರು ತಿಳಿಸಿದ್ದಾರೆ. ಈ ಘರ್ಷಣೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಶುಕ್ರವಾರ ರಾತ್ರಿಯಿಂದ ನಡೆದ ಘರ್ಷಣೆಯಲ್ಲಿ ಈವರೆಗೆ 19 ಬಂದೂಕುದಾರಿಗಳು ್ಲಹತರಾಗಿದ್ದಾರೆ ಎಂದು ಸಾರ್ವಜನಿಕ ಭದ್ರತೆಯ ಅಧೀನ ಕಾರ್ಯದರ್ಶಿ ಕ್ರಿಸ್ಟೋಬಲ್ ಕ್ಯಾಸ್ಟನೆಡಾ ತಿಳಿಸಿದ್ದಾರೆ.


ಅಗ್ವಾಜೆ ಡಿ ಕ್ಯಾಸ್ಟಿಲ್ಲಾದಲಿ ಎರಡು ರೌಡಿಗಳ ನಡುವೆ ಭೀಕರ ಕಾಳಗ ನಡೆದು ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟರು. ಹಿಂಸಾಚಾರ ಮತ್ತಷ್ಟು ಉಲ್ಭಣವಾಗುವುದನ್ನು ತಪ್ಪಿಸಲು ಪೊಲೀಸರು ಕಾರ್ಯಾಚರಣೆಗೆ ಇಳಿದರು. ಆಗ ಬಂದೂಕುದಾರಿಗಳು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದು 19 ದುಷ್ಕರ್ಮಿಗಳು ಹತರಾದರು. ತೀವ್ರಗಾಯಗೊಂಡ ಐವರು ಪೊಲೀಸ್ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹತರಾದ ರೌಡಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ದಾಳಿ ನಡೆಸಲು ಅವರು ಬಂದಿದ್ದ ಮೂರು ಪೀಕಪ್ ಟ್ರಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕವಸ್ತು ಕಳ್ಳಸಾಗಣೆ ಮೇಲೆ ಪ್ರಾಬಲ್ಯ ಸಾಧಿಸಲು ಈ ಪ್ರಾಂತ್ಯದಲ್ಲಿ ಅಗಾಗ ಎರಡು ಗುಂಪುಗಳ ನಡುವೆ ಕದನ ನಡೆಯುತ್ತಿದೆ. ಮೆಕ್ಸಿಕೋದ ಕುಖ್ಯಾತ ಡ್ರಗ್ ಲಾರ್ಡ್ ಜೋಕ್ವಿನ್ ಎಲ್ ಚಾಪೋ  ಗುಜ್‍ಮನ್‍ನನ್ನು ಕಳೆದ ವರ್ಷ ಜನವರಿಯಲ್ಲಿ ಬಂಧಿಸಿದ ನಂತರ ಅಲ್ಲಿ ಘರ್ಷಣೆ-ಗ್ಯಾಂಗ್‍ವಾರ್‍ಗಳು ಸಾಮಾನ್ಯವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin