ಅಡುಗೆಮನೆಗೂ ತಟ್ಟಿದ ಜಿಎಸ್‍ಟಿ ಬಿಸಿ : ಎಲ್‍ಪಿಜಿ ಬೆಲೆಯಲ್ಲಿ ಭಾರಿ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

LPG--000-14

ನವದೆಹಲಿ, ಜು.3- ಕೇಂದ್ರ ಸರ್ಕಾರ ಜು.1ರಿಂದ ದೇಶಾದ್ಯಂತ ಜಿಎಸ್‍ಟಿ ಜಾರಿಗೊಳಿಸಿ ಪ್ರತಿ ಅಡುಗೆ ಅನಿಲ ಸಿಲಿಂಡರ್ (ಎಲ್‍ಪಿಜಿ) ಬೆಲೆ 32 ರೂ.ಗಳಷ್ಟು ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಭಾರೀ ತೆರಿಗೆ ಹೊರೆ ಬಿದ್ದಿದೆ.  ಜಿಎಸ್‍ಟಿ ಜಾರಿ ಮತ್ತು ಸಬ್ಸಿಡಿ ಇಳಿಕೆ ಪರಿಣಾಮದಿಂದಾಗಿ 600 ರಿಂದ 620ರ ಆಸುಪಾಸಿನಲ್ಲಿದ್ದ ಪ್ರತಿ ಎಲ್‍ಪಿಜಿ ಬೆಲೆಯಲ್ಲಿ ಈಗ 650 ರೂ. ದಾಟಲಿದೆ.   ಗ್ರಾಹಕರು ಎರಡು ವರ್ಷಗಳ ಕಡ್ಡಾಯ ತಪಾಸಣೆ ಅಳವಡಿಕೆ ಮತ್ತು ಹೊಸ ಸಂಪರ್ಕಗಳ ದಾಖಲೆ ಪತ್ರಗಳ ಆಡಳಿತಾತ್ಮಕ ವೆಚ್ಚ ಹಾಗೂ ಹೆಚ್ಚುವರಿ ಸಿಲಿಂಡರ್‍ಗಳಿಗೆ ಶೇ.18ರಷ್ಟು ತೆರಿಗೆ ತೆರಬೇಕಾಗುತ್ತದೆ.

ಆಯಾ ರಾಜ್ಯಗಳ ತೆರಿಗೆ ಆಧಾರದ ಮೇಲೆ ಶೇ.12 ರೂ.ಗಳಿಂದ 15 ರೂ.ಗಳವರೆಗೆ ಸಿಲಿಂಡರ್ ದರ ಹೆಚ್ಚಾಗಲಿದ್ದು, ಪ್ರತಿ ಎಲ್‍ಪಿಜಿಗೆ 32 ರೂ.ಗಳಷ್ಟು ಅಧಿಕ ದರ ಹೆಚ್ಚಾಗಲಿದೆ.
ಶೇ.5ರಷ್ಟು ಜಿಎಸ್‍ಟಿ ಸ್ಲ್ಯಾಬ್ ಮೇಲೆ ಈ ಹೊಸ ದರ ನಿಗದಿಯಾಗಲಿದ್ದು, ಮೌಲ್ಯವರ್ಧಿತ ತೆರಿಗೆಯೂ (ವ್ಯಾಟ್) ಶೇ.2 ಮತ್ತು 4ರ ನಡುವೆ ಇರಲಿದೆ.  ಜಿಎಸ್‍ಟಿ ಜಾರಿಗೆ ಬಂದ ನಂತರ ಅನೇಕ ರಾಜ್ಯಗಳಲ್ಲಿ 12 ರಿಂದ 15ರೂ. ಗಳಷ್ಟು ಎಲ್‍ಪಿಜಿ ದರ ಏರಿಕೆಯಾಗಿದ್ದು, ಸಬ್ಸಿಡಿ ಮೊತ್ತದ ಮೇಲೆಯೂ ಇದು ಪರಿಣಾಮ ಬೀರಲಿದೆ. ಈವರೆಗೆ ಉದಾಹರಣೆಗೆ ಸಬ್ಸಿಡಿ ಮೊತ್ತ ಪಡೆಯುತ್ತಿದ್ದ ಆಗ್ರಾ ಮತ್ತು ದೆಹಲಿ ಅರ್ಹ ಗ್ರಾಹಕರ ಇನ್ನು ಮುಂದೆ ಕಡಿಮೆ ಮೊತ್ತದ ರಿಯಾಯ್ತಿ ಪಡೆಯಲಿದ್ದಾರೆ. ಹೊಸ ಅಧಿಸೂಚನೆ ಪ್ರಕಾರ ಅವರ ಬ್ಯಾಂಕ್‍ಗಳಿಗೆ 119.85 ರೂ. ಮೊತ್ತದ ಸಬ್ಸಿಡಿ ಬದಲಿಗೆ 107 ರೂ.ಗಳ ಸಹಾಯಧನವನ್ನು ವರ್ಗಾವಣೆಯಾಗಲಿದೆ ಎಂದು ಅಖಿಲ ಭಾರತ ಎಲ್‍ಪಿಜಿ ವಿತರಕರ ಒಕ್ಕೂಟದ

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin