ವಿಕಲಾಂಗರ ಸಾಧನಗಳ ಮೇಲಿನ ತೆರಿಗೆ ವಾಪಸ್‍ ಪಡೆಯುವಂತೆ ರಾಹುಲ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi-01

ನವದೆಹಲಿ, ಜು.3-ಜಿಎಸ್‍ಟಿ ಜಾರಿಯಿಂದಾಗಿ ವಿಕಲ ಚೇತನರು ಬಳಸುವ ಸಾಧನಾ ಪರಿಕರಗಳ ಮೇಲೆ ಹೆಚ್ಚಾಗಿರುವ ತೆರಿಗೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಲಾಂಗರ ಸಾಧನಗಳ ಮೇಲೆ ಜಿಎಸ್‍ಟಿ ಹೆಚ್ಚಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ವಿಕಲಚೇತನರ ಬಗ್ಗೆ ಕಟೋರವಾಗಿ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಕಲಚೇತನರು ಬಳಸುವ ಸಾಧನ, ಪರಿಕರಗಳ ಮೇಲೆ ತೆರಿಗೆ ಹೆಚ್ಚಿಸಿರುವುದು ಅತ್ಯಂತ ಅಮಾನವೀಯ. ಈ ತೆರಿಗೆ ಯನ್ನು ತಕ್ಷಣ ವಾಪಸ್ ಪಡೆಯಬೇಕೆಂದು ರಾಹುಲ್ ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin