ಸೀಸನ್ ಮುಗಿಯೋ ಮೊದಲು ಒಮ್ಮೆಯಾದರೂ ನೇರಳೆ ಹಣ್ಣು ತಿಂದುಬಿಡಿ, ಯಾಕೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Nerale--01

ಅದೆಷ್ಟೋ ಹಣ್ಣುಗಳಲ್ಲಿನ ಸತ್ವಗಳ ಬಗ್ಗೆ ಈಗಾಗಲೇ ಕೇಳಿರುತ್ತೀರಿ. ಆದರೆ ಕ್ಯಾನ್ಸರ್ ತಡೆಗಟ್ಟುವ ಅಂಶಗಳನ್ನು ಹೇರಳವಾಗಿ ಹೊಂದಿರುವ ನೇರಳೆ ಬಗ್ಗೆ ನಿಮಗಷ್ಟು ಮಾಹಿತಿ ಇಲ್ಲದಿರಬಹುದು. ನೇರಳೆ ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶಗಳ ಜೊತೆಗೆ ಇನ್ನು ಅದೆಷ್ಟೋ ಉಪಯೋಗಗಳಿವೆ. ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿಣ, ಸಿ ಜೀವಸತ್ವ ಸಮೃದ್ಧವಾಗಿವೆ. ಹಾಗಾಗಿ ಇದರಲ್ಲಿ ರೋಗ ನಿರೋಧಕ ಶಕ್ತಿ ಯಥೇಚ್ಚವಾಗಿದೆ ಎಂದೇ ಹೇಳಬಹುದು.

ಕ್ಯಾನ್ಸರ್ ತಡೆಗಟ್ಟಲು ನೇರಳೆ ಸಹಕಾರಿ ಎಂದು ಇತ್ತೀಚಿನ ಸಂಶೋಧನೆ ಗಳಿಂದ ಸಂಶೋಧಕರು ದೃಢಪಡಿಸಿದ್ದಾರೆ. ಮೂಳೆಗಳು ಬಲಿಷ್ಠಗೊಳ್ಳಲು ಹಿಮೋಗ್ಲೊಬಿನ್ ಪ್ರಮಾಣ ಹೆಚ್ಚಲು ಈ ಹಣ್ಣು ರಾಮಬಾಣವಾಗಿದೆ. ಮಧುಮೇಹಕ್ಕೆ ನೇರಳೆ ಹಣ್ಣಿನಿಂದ ಸಾಕಷ್ಟು ಉಪಯೋಗವಿದೆ. ನೇರಳೆ ಬೀಜದಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆ ಮಾಡಬಹುದು. ಅಲ್ಲದೆ, ನೇರಳೆ ಎಲೆಗಳನ್ನು ಅರಿದು ಸುಟ್ಟಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಪರಿಣಾಮಕಾರಿಯಾಗಿ ಗುಣವಾಗುತ್ತವೆ.

Nerale--02

ರಕ್ತಹೀನತೆಗೆ ಮದ್ದು:

ರಕ್ತಹೀನತೆಯಿಂದ ಬಳಲುವವರಿಗೆ ಈ ಹಣ್ಣು ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಹಿಮೋಗ್ಲೊಬಿನ್ ಅನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯಿಂದ ಬಳಲುವವರಿಗೆ ಶಕ್ತಿ ನೀಡಲಿದೆ. ನೇರಳೆ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ಸ್‍ಗಳು ಇರುವುದರಿಂದ ಹೃದ್ರೋಗ ಮತ್ತು ರಕ್ತದೊತ್ತಡ ನಿಯಂತ್ರಿಸುವ ಗುಣ ಇದರಲ್ಲಿದೆ. ಬ್ಯಾಕ್ಟೀರಿಯಾ ಗಳಿಂದ ಹರಡುವಂತಹ ಸೋಂಕುಗಳ ನಿವಾರಣೆಯಲ್ಲಿ ಇದರ ಎಲೆ, ತೊಗಟೆ, ಬೀಜವನ್ನು ಬಳಸಲಾಗುತ್ತದೆ. ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಸಹ ಕಡಿಮೆಯಾಗುವ ಜತೆಗೆ ಅತಿಸಾರವೂ ನಿಲ್ಲುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಈ ಹಣ್ಣಿನ ಸೇವನೆಯಿಂದ ಸಾಕಷ್ಟು ಲಾಭವಿದ್ದರೂ ಈ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇಲ್ಲ.

Nerale--03

ಇತ್ತೀಚೆಗೆ ಮಧುಮೇಹ ನಿಯಂತ್ರಣದಲ್ಲಿ ಇದರ ಪಾತ್ರವನ್ನು ಗಮನಿಸಿ ನೇರಳೆ ಜ್ಯೂಸ್ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿದೆ. ನೇರಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧದ ನಿರ್ಮೂಲನೆ ಜೊತೆಗೆ ಹಲ್ಲುಗಳು ದೃಢಗೊಳ್ಳುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin