ರದ್ದಾದ ಹಳೇ ನೋಟು ಠೇವಣಿಗೆ ಅವಕಾಶ ನೀಡುವಂತೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Supreme-Court

ನವದೆಹಲಿ, ಜು.4- ರದ್ದಾದ ಹಳೇ ನೋಟುಗಳನ್ನು ಅರ್ಹ ಕಾರಣಗಳಿಂದಾಗಿ ಹಿಂದಿರುಗಿಸಲು ಸಾಧ್ಯವಾಗದವರಿಗೆ ಸೂಕ್ತ ಅವಕಾಶ ಒದಗಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಆರ್‍ಬಿಐಗೆ ಎರಡು ವಾರಗಳ ಕಾಲವಕಾಶ ನೀಡಿದೆ. ಕೆಲವು ಕಾರಣಗಳಿಂದ ಅಮಾನ್ಯಗೊಂಡ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದೇ ಕಂಗಾಲಾಗಿದ್ದ ಜರಿಗೆ ಸುಪ್ರೀಂಕೋರ್ಟ್‍ನ ಈ ಸೂಚನೆಯಿಂದ ಕೊಂಚ ಮಟ್ಟಿಗೆ ನಿರಾಳವಾಗಿದೆ.  ತಮ್ಮಲ್ಲಿರುವ ರದ್ದಾದ 500 ಮತ್ತು 1000ರೂ.ಗಳ ಹಳೇ ನೋಟುಗಳನ್ನು ಮತ್ತೆ ಹಿಂದಿರುಗಿಸಲು ಅನುವು ಮಾಡಿಕೊಡಬೇಕೆಂದು ಕೋರಿ ಸಲ್ಲಿಸಲಾದ ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್ ಇಂದು ಕೇಂದ್ರ ಸರ್ಕರಕ್ಕೆ ಈ ಕುರಿತು ಪರಿಶೀಲಿಸುವಂತೆ ಸೂಚಿಸಿ ಎರಡು ವಾರಗಳ ಸಮಯ ನೀಡಿದೆ.

ಮುಖ್ಯವಾಗಿ ಅನಿವಾಸಿ ಭಾರತೀಯರೂ ಸೇರಿದಂತೆ ಅನೇಕರು ತಮ್ಮ ಬಳಿ ಇರುವ ಅನೇಕ ನೋಟುಗಳನ್ನು ಕಾರಣಾಂತರಗಳಿಂದ ಹಿಂದಿರುಗಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಳೇ ನೋಟುಗಳನ್ನು ಹಿಂದಿರುಗಿಸಿ ಹೊಸ ಕರೆನ್ಸಿಗಳನ್ನು ಪಡೆಯಲು ಅನುವು ಮಾಡಿಕೊಡಬೇಕೆಂದು ಹಲವು ದಿನಗಳಿಂದ ಬೇಡಿಕೆಗಳನ್ನು ಮುಂದಿಟ್ಟಿದ್ದರು.  ಹಳೇ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶವನ್ನು ಏಕೆ ನೀಡಬಾರದು ಎಂದು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಪ್ರಶ್ನಿಸಿದ್ದು, ಈ ಕುರಿತು ಕೂಲಕಂಷವಾಗಿ ಎರಡು ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin