ಇಸ್ರೇಲ್ ಪ್ರಧಾನಿ ಯೋಗಾಭ್ಯಾಸಕ್ಕೆ ನರೇಂದ್ರ ಮೋದಿಯೇ ಸ್ಫೂರ್ತಿಯಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

PM-Modi--01

ಜೆರುಸಲೇಂ, ಜು.5-ಯೋಗಾಸನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೋರುತ್ತಿರುವ ಅಪಾರ ಉತ್ಸಾಹದಿಂದ ತಾವು ಪ್ರಭಾವಿತರಾಗಿರುವುದಾಗಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮೋದಿಯವರು ಯೋಗದ ಬಗ್ಗೆ ಅಪಾರ ಉತ್ಸಾಹ ಹೊಂದಿದ್ದಾರೆ. ಅಲ್ಲದೆ, ದೇಶಗಳ ನಡುವೆ ಅದರಿಂದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅವರ ಈ ಉತ್ಸಾಹವು ತಮ್ಮನ್ನು ಪ್ರಭಾವಿತಗೊಳಿಸಿದೆ ಎಂದು ಹೇಳಿದರು.  ಯೋಗವನ್ನು ಹಂತಹಂತವಾಗಿ ಅಭ್ಯಾಸ ಮಾಡುವಂತೆ ಮೋದಿಯವರು ನನಗೆ ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ನಾನು ಕೆಳಮಟ್ಟದಿಂದ ಯೋಗವನ್ನು ಅಭ್ಯಾಸ ಮಾಡಲು ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin