ಗಡಿಯಲ್ಲಿ ಚೀನಾ ರಣೋತ್ಸಾಹ, ಪ್ರತ್ಯುತ್ತರ ನೀಡಲು ಭಾರತ ಸನ್ನದ್ಧ

ಈ ಸುದ್ದಿಯನ್ನು ಶೇರ್ ಮಾಡಿ

India-China--01

ನವದೆಹಲಿ/ಬೀಜಿಂಗ್, ಜು.5-ಭಾರತ-ಚೀನಾ ಗಡಿ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಉಲ್ಬಣಗೊಂಡಿದ್ದ ಬಿಕ್ಕಟ್ಟು 20ನೇ ದಿನಕ್ಕೆ ಕಾಲಿಟ್ಟಿದ್ದು, ಕವಿದಿರುವ ಯುದ್ಧದ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಬಿಕ್ಕಟ್ಟನ್ನು ಮತ್ತಷ್ಟು ಭುಗಿಲೇಳುವಂತೆ ಮಾಡಿದರೆ 1962ಕ್ಕಿಂತಲೂ (ಭಾರತ-ಚೀನಾ ಯುದ್ಧ) ಭಾರೀ ಸಾವು-ನೋವು ಮತ್ತು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಚೀನಾ ಮತ್ತೊಮ್ಮೆ ಬೆದರಿಕೆ ಹಾಕಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ದಿಟ್ಟ ಉತ್ತರ ನೀಡಿದ್ದು ಯಾವುದೇ ದಾಳಿ ಎದುರಿಸಲು ಭಾರತೀಯ ಯೋಧರು ಸರ್ವ ಸನ್ನದ್ಧರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಭಾರತವನ್ನು ಆಗ್ರಹಿಸುತ್ತಲೇ ಇರುವ ಚೀನಾ, ಗಡಿ ಬಿಕ್ಕಟ್ಟನ್ನು ಉಲ್ಭಣಗೊಳಿಸದಂತೆ ತಾಕೀತು ಮಾಡಿದೆ. ಇದಕ್ಕೆ ಬೆಂಬಲ ನೀಡುವಂತೆ ಚೀನಾ ಮಾಧ್ಯಮಗಳು ಸಹ ಪರಿಸ್ಥಿತಿ ಹದಗೆಟ್ಟರೆ 1962ರ ಇಂಡೋ-ಚೀನಾ ಯುದ್ಧಕ್ಕಿಂತ ಘೋರವಾಗಿರುತ್ತದೆ ಎಂದು ಹೇಳಿಕೊಂಡಿವೆ.   ಚೀನಾ ಸರ್ಕಾರ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಚೀನಾದ ಪರಾಕ್ರಮವನ್ನು ಹೊಗಳಲಾಗಿದೆ. ಭಾರತದ ಸೇನಾ ಶಕ್ತಿ-ಸಾಮಥ್ರ್ಯ ಏನೇ ಇದ್ದರೂ ಅದು ತನ್ನ ದೇಶದ ಬಲದ ಮುಂದೆ ನಗಣ್ಯ ಎಂಬ ರೀತಿಯಲ್ಲಿ ಕುಹಕವಾಡಿರುವುದು ಭಾರತವನ್ನು ಕೇರಳಿಸಿದೆ.

ಗಡಿ ವಿಷಯದಲ್ಲಿ ಪದೇ ಪದೇ ಕಾಲು ಕೆರೆದುಕೊಂಡು ಜಗಳವಾಡುತ್ತಲೇ ಬಂದಿರುವ ಭಾರತ ಈಗ ಎರಡೂ ದೇಶಗಳ ಬಿಕ್ಕಟ್ಟಿನಲ್ಲಿ ಭೂತಾನ್‍ನನ್ನು ಮಧ್ಯಕ್ಕೆ ಎಳೆದು ತಂದು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.  ಭಾರತ-ಚೀನ ನಡುವೆ 1962ರಲ್ಲಿ ನಡೆದ ಯುದ್ಧದಲ್ಲಿ ಚೀನಾ ಮೇಲುಗೈ ಸಾಧಿಸಿ ಭಾರತಕ್ಕೆ ಪಾಠ ಕಲಿಸಿತ್ತು. ತಾನು 1962ರ ಭಾರತ ಅಲ್ಲ. ದೇಶದ ಶಕ್ತಿಶಾಲಿ ದೇಶಗಳಲ್ಲಿ ಒಂದು ಎಂಬ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಯನ್ನು ಮತ್ತೊಮ್ಮೆ ಟೀಕಿಸಿರುವ ಚೀನಾ, ನಾವು ಕೂಡ ಸಾಕಷ್ಟು ಅಭಿವೃದ್ದಿ ಹೊಂದಿದ್ದೇವೆ. ರಕ್ಷಣಾ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ನಮಗೆ ಭಾರತ ಸರಿಸಾಟಿ ಅಲ್ಲ ಎಂದು ಕೊಚ್ಚಿಕೊಂಡಿದೆ.

ಭಾರತ ತಿರುಗೇಟು : ಚೀನಾದ ಗೊಡ್ಡು ಬೆದರಿಕೆಗೆ ಮಣಿಯುವುದಿಲ್ಲ ಎಂದು ತಿರುಗೇಟು ನೀಡಿರುವ ಭಾರತ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವುದಾಗಿ ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿದೆ. ಭಾರತ-ಚೀನಾ ಗಡಿ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಉಲ್ಬಣಗೊಂಡಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಳ್ಳಲಿದೆ ಎಂಬ ನಿರೀಕ್ಷೆ ಈ ಬೆಳವಣಿಗೆಯಿಂದ ಹುಸಿಯಾಗಿದೆ.

ಚೀನಾ ಸೈನಿಕರ ಜೊತೆ ಸಂಘರ್ಷ ನಡೆಯುತ್ತಿರುವ ಈಶಾನ್ಯ ಭಾರತದ ಸಿಕ್ಕಿಂ ಗಡಿಗೆ ಭಾರತ ಮತ್ತಷ್ಟು ಯೋಧರನ್ನು ನಿಯೋಜಿಸಿತ್ತು. ಇದರಿಂದಾಗಿ ಉಭಯ ದೇಶಗಳಲ್ಲಿ ಸಮರದ ಭೀತಿಯ ಆತಂಕದ ಛಾಯೆ ಕವಿದಿದೆ. ಭಾರತವೂ ತನ್ನ ಯೋಧರನ್ನು ವಾಪಸ್ ಕರೆಸಿಕೊಳ್ಳುವಂತೆ ಆಗ್ರಹಿಸಿರುವುದರಿಂದ ಗಡಿ ಬಿಕ್ಕಟ್ಟು ಮುಂದುವರಿದಿದೆ.   ಸಿಕ್ಕಿಂನ ಡೋ ಕಾಲ, ಡಾಂಗ್‍ಲಂಗ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಡಿ ಕಾವಲಿಗೆ ನಿಂತು ಗಸ್ತು ತಿರುಗುವ ತನ್ನ ಸೇನಾ ಪಡೆಗೆ ಬೆಂಬಲ ನೀಡಲು ಭಾರತವು ಮತ್ತಷ್ಟು ಯೋಧರನ್ನು ನಿಯೋಜಿಸಿತ್ತು. 1962ರ ಇಂಡೋ-ಚೀನಾ ಯುದ್ಧ ಮತ್ತೆ ಮರುಕಳಿಸುವ ಆತಂಕವ ವಾತಾವರಣ ಭುಗಿಲೆದ್ದಿದೆ.

ಸಿಕ್ಕಿಂ ವಲಯದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಡೋ ಕಾಲದಲ್ಲಿ ಭಾರತ ಮತು ಚೀನಾದ ಸೈನಿಕರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧರಾಗಿದ್ದರಿಂದ ಸಮರ ಸದೃಶ ಪರಿಸ್ಥಿತಿ ಅಲ್ಲಿ ನೆಲೆಗೊಂಡಿದೆ. ಡೋ ಕಾಲ ಪ್ರದೇಶದಲ್ಲಿ ಚೀನಾ ಕಾನೂನುಬಾಹಿರವಾಗಿ ರಸ್ತೆ ನಿರ್ಮಿಸುತ್ತಿರುವುದು ಭಾರತದ ಯೋಧರನ್ನು ಕೆರಳಿಸಿತ್ತು. ಬಿಕ್ಕಟ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin